ಮತ್ತೆ ಬರಲಿದೆಯೇ ಬೈಕ್‌ ಟ್ಯಾಕ್ಸಿ?

7
ಮೃದು ಧೋರಣೆ ತಳೆದ ಸಾರಿಗೆ ಪ್ರಾಧಿಕಾರ

ಮತ್ತೆ ಬರಲಿದೆಯೇ ಬೈಕ್‌ ಟ್ಯಾಕ್ಸಿ?

Published:
Updated:

ಬೆಂಗಳೂರು: ಸಾರಿಗೆ ಪ್ರಾಧಿಕಾರವು ನಗರದಲ್ಲಿ ಸಂಚರಿಸುತ್ತಿರುವ ಬೈಕ್‌ ಟ್ಯಾಕ್ಸಿಗಳ ಕುರಿತು ಮೃದು ಧೋರಣೆ ತಳೆದಿದೆ. ನಗರದ ಕೊನೆಯ ಭಾಗಗಳನ್ನು ತಲುಪಲು ಬೈಕ್‌ ಟ್ಯಾಕ್ಸಿ ಸೌಲಭ್ಯವೇ ಪರಿಹಾರ ಎಂಬ ಅಂಶವನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. 

‘ಕಳೆದ ವರ್ಷ ಬುಕ್ಕಿಂಗ್‌ ಆ್ಯಪ್‌ ಮೂಲಕ ಸೇವೆ ಒದಗಿಸುತ್ತಿದ್ದ ಬೈಕ್‌ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬೈಕ್‌ ಟ್ಯಾಕ್ಸಿಗಳು ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿದರೂ ಪ್ರಯಾಣಿಕರು ಅಪಾಯಗಳಿಗೆ ತೆರೆದುಕೊಂಡೇ ಪ್ರಯಾಣಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದರು.

ಈಗ ಇಲಾಖೆಯ ನಿಲುವು ಬದಲಾಗಿದೆ. ಸಾರಿಗೆ ಆಯುಕ್ತರು ಮತ್ತು ಇತರ ಅಧಿಕಾರಿಗಳ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ಕೊಡುವಂತೆ ಆಯುಕ್ತರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ. 

‘ಗೋವಾದಲ್ಲಿ 15 ವರ್ಷಗಳಿಂದ ಬೈಕ್‌ ಟ್ಯಾಕ್ಸಿಗಳು ಓಡಾಡುತ್ತಿವೆ. ಇದೇ ರೀತಿಯ ಸೇವೆಯನ್ನು ಇತರ ನಾಲ್ಕು ರಾಜ್ಯಗಳಲ್ಲಿಯೂ ಒದಗಿಸಲಾಗುತ್ತಿದೆ. ನಗರದಲ್ಲಿ ಕೊನೆಯ ಭಾಗಗಳಿಗೆ ತಲುಪಲು ಸಾರಿಗೆ ಸೌಲಭ್ಯದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರಯಾಣಿಕರ ಸಂಪರ್ಕ ಕಲ್ಪಿಸಲು ಬೈಕ್‌ ಟ್ಯಾಕ್ಸಿ ಪರಿಣಾಮಕಾರಿ ಮಾರ್ಗ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಿದ್ಧಪಡಿಸಿದ ‘ನಗರದ ಸಂಚಾರ ವ್ಯವಸ್ಥೆ ಉತ್ತೇಜಿಸಲು ಟ್ಯಾಕ್ಸಿ ನೀತಿ ಮಾರ್ಗಸೂಚಿ’ ವರದಿಯನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರ ಬೈಕ್‌ ಟ್ಯಾಕ್ಸಿಗಳ ಪರ ಚಿಂತನೆ ನಡೆಸಿದೆ.

‘ದ್ವಿಚಕ್ರ ವಾಹನಗಳನ್ನು ಪ್ರಯಾಣಿಕ ವಾಹನಗಳನ್ನಾಗಿ ಓಡಿಸಲು ಪರವಾನಗಿ ನೀಡಬೇಕಾದರೆ ಹೊಸ ನಿಯಮಾವಳಿ ಮಾಡಬೇಕಾಗಬಹುದು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬೈಕ್‌ ಸವಾರ ಜವಾಬ್ದಾರಿಯುಳ್ಳವನೋ, ಈ ಸೇವೆ ನೀಡಲು ಅರ್ಹನೋ ಎಂಬುದನ್ನೂ ನೋಡಬೇಕಾಗುತ್ತದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.  

ಬೈಕ್‌ ಟ್ಯಾಕ್ಸಿಗಳ ದರ ನಿಗದಿ ಬಗ್ಗೆ ಪ್ರಯಾಣಿಕ ಸಾರಿಗೆ ಕ್ಷೇತ್ರದಲ್ಲಿ ಭಾಗಿಯಾಗಿರುವವರು, ಸೇವಾದಾರರು ಎಲ್ಲರ ಸಲಹೆ ಪಡೆದು ನಿರ್ಧರಿಸಲಾಗುವುದು. ನಾವು ಈ ಕ್ಷೇತ್ರದಲ್ಲಿರುವ ಮೂಲ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಈ ಸೇವೆಗೆ ಕ್ಯಾಬ್‌ ಚಾಲಕರಿಂದಲೂ ಆಕ್ಷೇಪ ಕೇಳಿಬಂದಿದೆ. ಮೊದಲು ಅವರ ಮನವೊಲಿಸಿ ಬೈಕ್‌ ಟ್ಯಾಕ್ಸಿ ಪರಿಕಲ್ಪನೆಯನ್ನು ಜಾರಿಗೆ ತರಬೇಕಿದೆ ಎಂದು ಅಧಿಕಾರಿಗಳು ಹೇಳಿದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !