ಬುಧವಾರ, ನವೆಂಬರ್ 20, 2019
21 °C
ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದ ದೂರುದಾರ

ಪತಿ ಇಲ್ಲದಾಗ ಬೈಕ್‌ ಕದ್ದೊಯ್ದ

Published:
Updated:

ಬೆಂಗಳೂರು: ‘ಬೈಕ್‌ ಮಾರಾಟ ಮಾಡುವುದಾಗಿ ಓಎಲ್‌ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿದ್ದ ಜಾಹೀರಾತು ನೋಡಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಟೆಸ್ಟ್‌ ಡ್ರೈವ್‌ ಸೋಗಿನಲ್ಲಿ ಬೈಕ್ ಕದ್ದುಕೊಂಡು ಹೋಗಿದ್ದಾನೆ’ ಎಂದು ಆರೋಪಿಸಿ ಬಿ. ಸಂತೋಷ್ ಎಂಬುವರು ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದಾರೆ.

‘ಸಂತೋಷ್ ನೀಡಿರುವ ದೂರಿನನ್ವಯ ಆರೋಪಿ ಅರವಿಂದ್ ಅಲಿಯಾಸ್ ಕಿಶೋರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ವಿಳಾಸ ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಬೈಕ್‌ ಮಾರಾಟ ಮಾಡಲು ಕೆಲವು ದಿನಗಳ ಹಿಂದಷ್ಟೇ ಜಾಹೀರಾತು ನೀಡಿದ್ದೆ. ಭಾನುವಾರ ಬೆಳಿಗ್ಗೆ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದೆ. ಪತ್ನಿ ಮಾತ್ರ ಮನೆಯಲ್ಲಿ ಇದ್ದರು’ ಎಂದು ದೂರಿನಲ್ಲಿ ಸಂತೋಷ್ ಹೇಳಿದ್ದಾರೆ.

‘ಮಧ್ಯಾಹ್ನ 2.30ರ ಸುಮಾರಿಗೆ ಮನೆಗೆ ಬಂದಿದ್ದ ಆರೋಪಿ ಓಎಲ್‌ಎಕ್ಸ್‌ ಜಾಲ ತಾಣದಲ್ಲಿದ್ದ ಜಾಹೀರಾತನ್ನು ಪತ್ನಿಗೆ ತೋರಿಸಿದ್ದ. ಬೈಕ್ ಖರೀದಿಸುವುದಾಗಿ ಹೇಳಿದ್ದ ಆರೋಪಿ, ಟೆಸ್ಟ್‌ ಡ್ರೈವ್ ಮಾಡುವುದಾಗಿ ಹೇಳಿ ಕೀ ಪಡೆದುಕೊಂಡು ಹೋಗಿದ್ದಾನೆ. ವಾಪಸು ಬಂದಿಲ್ಲ’ ಎಂದು ಸಂತೋಷ್ ದೂರಿದ್ದಾರೆ.

ಪ್ರತಿಕ್ರಿಯಿಸಿ (+)