ವ್ಹೀಲಿಂಗ್‌: ಟ್ವಿಟರ್‌ ವಿಡಿಯೊ ಆಧರಿಸಿ ಇಬ್ಬರ ಸೆರೆ

7

ವ್ಹೀಲಿಂಗ್‌: ಟ್ವಿಟರ್‌ ವಿಡಿಯೊ ಆಧರಿಸಿ ಇಬ್ಬರ ಸೆರೆ

Published:
Updated:
Deccan Herald

ಬೆಂಗಳೂರು: ಬೈಕ್‌ ವ್ಹೀಲಿಂಗ್‌ ಸಂಬಂಧ ಸಾರ್ವಜನಿಕರೊಬ್ಬರು ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊ ಆಧರಿಸಿ ಯುವಕರಿಬ್ಬರನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಂ.ಬಿ.ಲೇಔಟ್ ನಿವಾಸಿಗಳಾದ ಮೆಹಬೂಬ್ ಪಾಷಾ ಹಾಗೂ ಮೊಹಮ್ಮದ್ ಇರ್ಫಾನ್ ಬಂಧಿತರು. ಅವರ ಬೈಕನ್ನು ಜಪ್ತಿ ಮಾಡಲಾಗಿದೆ.

‘ಆರೋಪಿಗಳು, ಹೆಗಡೆ ನಗರದಲ್ಲಿ ಬೈಕ್‌ ವ್ಹೀಲಿಂಗ್ ಮಾಡುತ್ತಿದ್ದರು. ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಅದನ್ನು ಗಮನಿಸಿದ್ದ ಮೂರ್ತಿ ಎಂಬುವರು ಯುವಕರ ಬೈಕ್ ವ್ಹೀಲಿಂಗ್‌ ದೃಶ್ಯಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್‌ ಮಾಡಿಕೊಂಡಿದ್ದರು’ ಎಂದು ಹೆಬ್ಬಾಳ ಸಂಚಾರ ಪೊಲೀಸರು ಹೇಳಿದರು.

‘ವಿಡಿಯೊ ನೋಡಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್(ಸಂಚಾರ) ಆರ್‌.ಹಿತೇಂದ್ರ, ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಬೈಕ್ ನೋಂದಣಿ ಸಂಖ್ಯೆ ಮೂಲಕ ಯುವಕರನ್ನು‌ ಪತ್ತೆ ಹಚ್ಚಲಾಯಿತು’ ಎಂದರು.

‘ಬಂಧಿತರು, ಕಾಲೇಜು ವಿದ್ಯಾರ್ಥಿಗಳು. ಬೇರೆಯವರ ಬೈಕ್‌  ಪಡೆದು ವ್ಹೀಲಿಂಗ್‌ ಮಾಡುತ್ತಿದ್ದರು. ಬೈಕ್ ಮಾಲೀಕರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಮೂವರ ಸೆರೆ: ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದ ಆರೋಪದಡಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

‘ಗಂಗಾ ನಗರದ ಸಿಬಿಐ ರಸ್ತೆಯಲ್ಲೇ ಯುವಕನೊಬ್ಬ ವ್ಹೀಲಿಂಗ್‌ ಮಾಡುತ್ತಿದ್ದ. ಆತನನ್ನು ಸೆರೆಹಿಡಿದು ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಆರ್‌.ಟಿ.ನಗರ ಪೊಲೀಸರು ಹೇಳಿದರು.

ಯಲಹಂಕ ಪೊಲೀಸರು, ‘ಎಂ.ಎಸ್‌.ಪಾಳ್ಯದಲ್ಲಿ ಇಬ್ಬರು ಯುವಕರು, ವ್ಹೀಲಿಂಗ್‌ ಮಾಡುತ್ತಿದ್ದರು. ಅವರನ್ನು ಬಂಧಿಸಿ, ಬೈಕ್‌ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !