ಮಂಗಳವಾರ, ಸೆಪ್ಟೆಂಬರ್ 22, 2020
26 °C

ಜಯದೇವ: ಜೈವಿಕ ಶುದ್ಧೀಕರಣ ಯಂತ್ರ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜೈವಿಕ ಶುದ್ಧೀಕರಣ ಯಂತ್ರ ಅಳವಡಿಸಲಾಗಿದೆ. 

ಈ ಯಂತ್ರವನ್ನು ನಗರದ ನವೋದ್ಯಮವಾದ ರಾಡಾರ್ಕ್ ಮೆಡಿಕಲ್ ಇನೋವೇಶನ್ಸ್‌ ಪ್ರೈ.ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಆರು ಹಂತಗಳಲ್ಲಿ ಗಾಳಿಯ ಮೂಲಕ ಸೋಂಕು ನಿವಾರಕವನ್ನು ಯಂತ್ರ ಸಿಂಪಡಿಸಲಿದೆ. ಮೆಕ್ಯಾನಿಕಲ್, ಕೆಮಿಕಲ್, ಓಜೋನ್, ಅಲ್ಟ್ರಾವೈಲೆಟ್, ಪ್ಲಾಸ್ಮಾ ಮತ್ತು ಎಚ್‌ಇಪಿಎ ಫಿಲ್ಟರ್‌ಗಳನ್ನು ಒಳಗೊಂಡಿದೆ. 

‘ಈ ಯಂತ್ರವನ್ನು ಒಳಾಂಗಣ ಪ್ರದೇಶಗಳಾದ ಶಸ್ತ್ರಚಿಕಿತ್ಸೆ ಕೇಂದ್ರಗಳು, ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಸಭಾಂಗಣಗಳು ಸೇರಿದಂತೆ ವಿವಿಧೆಡೆ ಅಳವಡಿಕೆ ಮಾಡಿಕೊಳ್ಳಬಹುದು. ಇದು ವೈರಲ್‌ ಲೋಡ್‌ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ತೀವ್ರನಿಗಾ ಘಟಕ, ಶಸ್ತ್ರಚಿಕಿತ್ಸೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ
ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. 

ಡಾ. ಮುರಳಿ ಮೋಹನ್, ಡಾ. ಕಿರಣ್ ಖಾನಾಪುರೆ, ಡಾ. ಶ್ರೀಧರ್ ಬಲರಾಮ್ ಹಾಗೂ ಡಾ. ಪ್ರದೀಪ್ ಜೈನ್ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.