ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ: ಪುನಃ ಬಯೋಮೆಟ್ರಿಕ್ ಕಡ್ಡಾಯ

Last Updated 11 ಜೂನ್ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಪಡೆಯುತ್ತಿರುವ ಕುಟುಂಬದ ಫಲಾನುಭವಿಗಳು ಮತ್ತೊಮ್ಮೆ ಬಯೋಮೆಟ್ರಿಕ್ ನೀಡುವುದು ಕಡ್ಡಾಯ.

ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಫಲಾನುಭವಿಗಳು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಜುಲೈ 31ರ ಒಳಗೆ ಬಯೋಮೆಟ್ರಿಕ್ ದಾಖಲಿಸಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆಫಲಾನುಭವಿ ಹೆಸರಿನಲ್ಲಿ ನೀಡುತ್ತಿರುವ ಅಕ್ಕಿ ಸೇರಿದಂತೆ ಇತರ ಪಡಿತರ ಕಡಿತಗೊಳ್ಳಲಿದೆ.

ನಿಧನ ಹೊಂದಿದವರು, ವಿವಾಹವಾಗಿ ಹೊರಗೆ ಹೋದವರು, ಇತರ ಕಾರಣಗಳಿಂದ ಗ್ರಾಮ ತೊರೆದವರ ಹೆಸರಿನಲ್ಲಿ ಪಡಿತರ ನೀಡಲಾ
ಗುತ್ತಿದೆ. ಪಡಿತರ ಅಪವ್ಯಯ ತಪ್ಪಿಸುವ ಸಲುವಾಗಿ ಮತ್ತೊಮ್ಮೆ ಬಯೋಮೆಟ್ರಿಕ್ ದಾಖಲಿಸಲಾಗುತ್ತಿದ್ದು, ಇಂತಹ ಪ್ರಕ್ರಿಯೆ ಆಗಾಗ ನಡೆಯುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜುಇಲಾಖೆ ತಿಳಿಸಿದೆ.

ಇದರ ಜತೆಗೆ ಅಡುಗೆ ಅನಿಲದ ಮಾಹಿತಿ ಹಾಗೂ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರ ವಿವರಗಳನ್ನೂ ದಾಖಲಿಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT