ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಬ್ಲ್ಯುಎಸ್ ಸ್ಪರ್ಧೆಯಲ್ಲಿ ವೆಂಕಟ್ ತನ್ಮಯ್ ಕುಮಾರ್ ಗೆಲುವು

Last Updated 14 ಜನವರಿ 2022, 15:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅಮಾತ್ರ ಅಕಾಡೆಮಿ ಶಾಲೆಯ ವೆಂಕಟ್ ತನ್ಮಯ್ ಕುಮಾರ್ ‘ಅಮೆಜಾನ್ ವೆಬ್‌ ಸೇವೆ’ಗಳ (ಎಡಬ್ಲ್ಯುಎಸ್) ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ವೈಜ್ಞಾನಿಕ ಮನೋಧರ್ಮ, ವಿನ್ಯಾಸ ಮತ್ತು ಕೋಡಿಂಗ್ ಕೌಶಲಗಳ ಪರೀಕ್ಷೆಗಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಇನ್ನೊವೇಟಿವ್ ಕೋಶ, ಅಟಲ್ ಇನ್ನೊವೇಷನ್ ಮಿಷನ್, ನೀತಿ ಆಯೋಗ ಮತ್ತು ಸಿಬಿಎಸ್‌ಇ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯ ‘ಯಂಗ್‌ ಬಿಲ್ಡರ್ಸ್‌ ಚಾಲೆಂಜ್‌–2021’ ವಿಭಾಗದಲ್ಲಿ ತನ್ಮಯ್‌ ಸಿದ್ಧಪಡಿಸಿದ್ದ ‘ಇಂಟಲಿಜೆಂಟ್ ಬಸ್‌ ಸಿಮ್ಯುಲೇಟರ್ ಆ್ಯಪ್’ ಗೆಲುವು ಸಾಧಿಸಿತು.

ರಸ್ತೆಯಲ್ಲಿ ಬಸ್‌, ಆಂಬುಲೆನ್ಸ್‌ನಂತಹ ಆದ್ಯತಾ ವಾಹನಗಳು ಹಾದುಹೋದಾಗ ಈ ತಾಂತ್ರಿಕತೆ ಕಾರ್ಯನಿರ್ವಹಿಸುತ್ತದೆ. ಆದ್ಯತಾ ವಾಹನಗಳು ಸಮೀಪಿಸಿದಾಗ ಸ್ಮಾರ್ಟ್‌ ಲೇನ್‌ನ ಬಣ್ಣ ಬದಲಾಗಿ, ಚಾಲಕರನ್ನು ಎಚ್ಚರಿಸುವುದು ಆ್ಯಪ್‌ನ ವಿಶೇಷ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವೆಂಕಟ್ ತನ್ಮಯ್ ಸೇರಿದಂತೆ ದೇಶದ 10 ಶಾಲೆಗಳ ವಿಜೇತರನ್ನು ಸನ್ಮಾನಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT