ಬೆಂಗಳೂರು: ಬಿಟ್ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆ ಜತೆ ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪಿಸಿಲಾದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಮಕ್ಕಳು ಹಾಗೂ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ರೆಹಮಾನ್ ಅವರ ಮೊಮ್ಮಗನ ನಿವಾಸವೂ ಸೇರಿ ಒಟ್ಟು 12 ಕಡೆ ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಅವರ ಮಕ್ಕಳಾದ ಕಾಂಗ್ರೆಸ್ನ ಯುವ ಮುಖಂಡ ಮೊಹಮ್ಮದ್ ನಲಪಾಡ್, ಒಮರ್ ಫಾರೂಕ್ ನಲಪಾಡ್ ಹಾಗೂ ಕೆ.ರೆಹಮಾನ್ ಅವರ ಮೊಮ್ಮಗ ಅಕೀಬ್ ಖಾನ್ ಅವರ ಮನೆ, ಕಚೇರಿ ಮತ್ತು ಶ್ರೀಕಿ ನಿವಾಸದಲ್ಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಶೋಧ ನಡೆಸಿತು.

ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆದ ದಾಳಿಯ ವೇಳೆ ಕೆಲವು ದಾಖಲೆಗಳು ಹಾಗೂ ಮೊಬೈಲ್, ಲ್ಯಾಪ್ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು ಎಂದು ಇ.ಡಿ. ಮೂಲಗಳು ತಿಳಿಸಿವೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ (ಪಿಎಂಎಲ್ಎ) 2002ರಡಿ ನಡೆದ ತನಿಖೆಯಲ್ಲಿ, ಮೊಹಮ್ಮದ್ ನಲಪಾಡ್ ಮತ್ತು ಒಮರ್ ಫಾರೂಕ್ ನಲಪಾಡ್ ಅವರು ಶ್ರೀಕಿ ಅವರ ಆಪ್ತ ಸಹಚರರು ಮತ್ತು ಅಕ್ರಮ ಹಣದ ಮುಖ್ಯ ಪಾಲುದಾರರು ಎಂಬುದು ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಜೊತೆ ವ್ಯಾವಹಾರಿಕ ನಂಟು ಹೊಂದಿರುವ ಆರೋಪ ಮೊಹಮ್ಮದ್ ನಲಪಾಡ್ ವಿರುದ್ಧ ಕೇಳಿಬಂದಿತ್ತು. ಹಿಂದೆ ವಿಶೇಷ ತನಿಖಾ ದಳ ಮೊಹಮ್ಮದ್ ಅವರನ್ನು ವಿಚಾರಣೆಗೊಳಪಡಿಸಿತ್ತು.

ಬಿಟ್ಕಾಯಿನ್ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲ ಆರು ವರ್ಷಗಳ ಅವಧಿಯಲ್ಲಿ ಮೊಹಮ್ಮದ್ ಮತ್ತು ಶ್ರೀಕಿ ಮಧ್ಯೆ ನಿರಂತರ ಹಣಕಾಸು ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ ಒಟ್ಟು ₹4.65 ಕೋಟಿ ಹಣ ಕೈ ಬದಲಾಗಿದೆ. ಬಿಟ್ಕಾಯಿನ್ ವಹಿವಾಟಿಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

2017ರಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಹಾಗೂ ಬಿಟ್ಕಾಯಿನ್ಗಳನ್ನು ಕಳವು ಮಾಡಿ ಅವುಗಳನ್ನು ಕ್ರಿಪ್ಟೋ ಪ್ಲಾಟ್ಫಾರ್ಮ್ಗಳ ಮೂಲಕ ಮಾರಾಟ ಮಾಡಿದ ಆರೋಪದ ಮೇಲೆ ಶ್ರೀಕಿ ಮತ್ತು ಅವರ ಸಹಚರರ ವಿರುದ್ಧ ರಾಜ್ಯ ಪೊಲೀಸರು ಸಲ್ಲಿಸಿದ ಎಫ್ಐಆರ್ಗಳು ಮತ್ತು ಚಾರ್ಜ್ಶೀಟ್ಗಳಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣ ಗೊತ್ತಾಯಿತು.

ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್, ಒಮರ್ ಫಾರೂಕ್ ನಲಪಾಡ್ ಮತ್ತು ಅಕೀಬ್ ಖಾನ್ ಅವರು ಶಾಮೀಲಾಗಿರುವ ಶಂಕೆಯ ಮೇರೆಗೆ ಇ.ಡಿ ದಾಳಿ ನಡೆಸಿದೆ.

ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೊಹಮ್ಮದ್ ನಲಪಾಡ್ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು. ಆಗ ಅವರು, ‘ನಾನು ಮತ್ತು ನನ್ನ ಸಹೋದರ ಯಾವುದೇ ಅಕ್ರಮವೆಸಗಿಲ್ಲ. ಅಲ್ಲದೇ ತನಿಖಾ ಸಂಸ್ಥೆ ಆರೋಪ ಮಾಡಿದಂತೆ ಅಕ್ರಮವಾಗಿ ಹಣ ಪಡೆದುಕೊಂಡಿಲ್ಲ’ ಎಂದು ಹೇಳಿದ್ದರು.

ತನಿಖೆಯ ಭಾಗವಾಗಿ ಶ್ರೀಕಿಯನ್ನು ರಾಜ್ಯ ಪೊಲೀಸರು ಬಂಧಿಸಿದ್ದರು.

ಪ್ರಕರಣ ನಡೆದುಬಂದ ಹಾದಿ

2019 ಜುಲೈ: ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ವೆಬ್ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ

2020 ನವೆಂಬರ್: ಡಾರ್ಕ್ನೆಟ್ ಡ್ರಗ್ ಪ್ರಕರಣದಲ್ಲಿ ಶ್ರೀಕಿ ಬಂಧಿಸಿದ ಸಿಸಿಬಿ ಪೊಲೀಸರು

2021 ಜನವರಿ: ಶ್ರೀಕಿಯಿಂದ ₹9 ಕೋಟಿ ಮೌಲ್ಯದ 31 ಬಿಟ್ಕಾಯಿನ್ ವಶಪಡಿಸಿಕೊಂಡಿದ್ದಾಗಿ ಹೇಳಿದ ಸಿಸಿಬಿ. ಬಳಿಕ ಅವುಗಳು ನಾಪತ್ತೆಯಾದವು

2023 ಜೂನ್: ಬಿಟ್ಕಾಯಿನ್ ಹಗರಣ ತನಿಖೆಗಾಗಿ ವಿಶೇಷ ತಂಡ ರಚಿಸಿದ (ಎಸ್ಐಟಿ) ರಾಜ್ಯ ಸರ್ಕಾರ

2024 ಜೂನ್: ಶ್ರೀಕಿ ಬಂಧಿಸಿದ ಎಸ್ಐಟಿ

2024 ಜುಲೈ: ಶ್ರೀಕಿ ಮತ್ತು ಆತನ ಸಹಚರರಿಗೆ ಜಾಮೀನು ಮಂಜೂರು

2025 ಅಕ್ಟೋಬರ್: ಪೋಕರ್ ಬಾಜಿ ಹ್ಯಾಕಿಂಗ್ ಪ್ರಕರಣದಲ್ಲಿ ಶ್ರೀಕಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ

ಶ್ರೀಕಿ–ನಲಪಾಡ್ ನಡುವೆ ಜಗಳ: ಆತ್ಮೀಯ ಸ್ನೇಹಿತರಾಗಿದ್ದ ಶ್ರೀಕಿ ಮತ್ತು ಮೊಹಮದ್ ನಲಪಾಡ್ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದರು. ಯು.ಬಿ. ಸಿಟಿಯ ಫರ್ಜಿ ಕ್ಲಬ್ನಲ್ಲಿ ನಡೆದ ಪಾರ್ಟಿ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಆಗ ಜಗಳ ಬಿಡಿಸಲು ಬಂದ ವಿದ್ವತ್ ಲೋಕನಾಥ್ ಎಂಬುವರ ಮೇಲೆ ಹಲ್ಲೆಯಾಗಿತ್ತು. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ನಡೆದ ಸಿಸಿಬಿ ವಿಚಾರಣೆ ವೇಳೆ ಇಬ್ಬರ ನಡುವೆ ಬಿಟಿಕಾಯಿನ್ ವಿಚಾರಕ್ಕೆ ಜಗಳವಾಗಿತ್ತು ಎಂಬುದು ಗೊತ್ತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.