ಪ್ರವಾಹ ಸಂತ್ರಸ್ತರಿಗೆ ಬಿಜೆಪಿ ನೆರವು

6

ಪ್ರವಾಹ ಸಂತ್ರಸ್ತರಿಗೆ ಬಿಜೆಪಿ ನೆರವು

Published:
Updated:
Deccan Herald

ಬೆಂಗಳೂರು: ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಪೂರೈಸುವ ಸಲುವಾಗಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಶನಿವಾರ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು.

ಅಕ್ಕಿ, ಔಷಧ, ಬಿಸ್ಕೆಟ್‌, ಹೊದಿಕೆ, ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ತುಂಬಿಕೊಂಡು ಕೊಡಗು ಜಿಲ್ಲೆಯತ್ತ ಹೊರಟ ಲಾರಿಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಶನಿವಾರ ಹಸಿರು ನಿಶಾನೆ ತೋರಿಸಿದರು.

‘ಪ್ರವಾಹ ಮತ್ತು ಭೂಕುಸಿತದಿಂದಾಗಿ ಮನೆಗಳನ್ನು ಕಳೆದುಕೊಂಡ ಜನರಿಗೆ ಬಟ್ಟೆ, ಬ್ಲಾಂಕೆಟ್ ಮತ್ತಿತರ ಅಗತ್ಯಗಳಿವೆ ಎಂದು ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಕ್ಷದ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ಕಳುಹಿಸುವ ಕುರಿತು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಬೇಡಿಕೆ ಬಂದರೆ ಇನ್ನಷ್ಟು ಸಾಮಗ್ರಿಗಳು ರವಾನಿ‌ಸಲಾಗುವುದು’ ಎಂದು ಶೋಭಾ ತಿಳಿಸಿದರು. 

‘ನೆರೆಯಿಂದ ಸಮಸ್ಯೆ ಉಂಟಾಗಿರುವ ಉಳಿದ ಜಿಲ್ಲೆಗಳಿಗೂ ಪರಿಹಾರ ಸಾಮಗ್ರಿ ಕಳುಹಿಸುತ್ತೇವೆ’ ಎಂದರು.

ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ಉದಾರ ನೆರವು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !