ಗುರುವಾರ , ನವೆಂಬರ್ 26, 2020
21 °C

ಭಾವಸಾರ ಕ್ಷತ್ರಿಯ ಸಮಾಜ: ಯಶಸ್ವಿ ಆನ್‌ಲೈನ್‌ ವಧುವರರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾವಸಾರ ಕ್ಷತ್ರಿಯ ಸಮಾಜದ ವಧುವರರ ರಾಜ್ಯಮಟ್ಟದ ಆನ್‌ಲೈನ್‌ ಸಮಾವೇಶವು ಭಾನುವಾರ ಯಶಸ್ವಿಯಾಗಿ ಜರುಗಿತು.

ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ (ಎಐಬಿಕೆಎಂ) ರಾಜ್ಯ ಘಟಕವು ಮೊದಲ ಬಾರಿಗೆ ಆಯೋಜಿಸಿದ್ದ ಈ ಆನ್‌ಲೈನ್‌ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗದ ವಧು ವರರು, ಅವರ ಪಾಲಕರು ಸಕ್ರಿಯವಾಗಿ ಭಾಗವಹಿಸಿದ್ದರು.

‘ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ವಿರಾಮ ಅವಧಿ ಸೇರಿದಂತೆ 10 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ನೂರಾರು ವಿವಾಹ ಆಕಾಂಕ್ಷಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಸಮಾಜ ಬಂಧುಗಳು ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ವಧು – ವರರು ಪರಸ್ಪರ ಪರಿಚಯಿಸಿಕೊಳ್ಳಲು ಈ ವೇದಿಕೆಯು ಅಪೂರ್ವ ಅವಕಾಶ ಒದಗಿಸಿತ್ತು‘ ಎಂದು ಎಐಬಿಕೆಎಂನ ರಾಜ್ಯ ಘಟಕದ ಅಧ್ಯಕ್ಷ ಸುಧೀರ್‌ ನವಲೆ ಅವರು ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು. ವೇಣುಗೋಪಾಲ್‌, ಮಂಜುನಾಥ ಅಂಚಲಕರ್‌, ಪ್ರಕಾಶ್‌ ನವಲೆ, ರಾಕೇಶ್ ರಾವ್‌ ನೇತೃತ್ವದಲ್ಲಿನ ತಾಂತ್ರಿಕ ತಂಡವು ಈ ಕಾರ್ಯಕ್ರಮದಲ್ಲಿ ಎಲ್ಲಿಯೂ ತಾಂತ್ರಿಕ ಅಡಚಣೆ ಎದುರಾಗದಂತೆ ಕಾಯಕ್ರಮವನ್ನು ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿತು. ಪ್ರಕಾಶ್ ಬೋಂಗಳೆಕರ್ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು