ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನ್ ಹಗರಣ: ಸಿಬಿಐನಿಂದ ನಾಲ್ಕು ಪ್ರಕರಣ ದಾಖಲು

Last Updated 13 ಜೂನ್ 2018, 19:55 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಸೃಜನ್ ಹಗರಣದ ಸಂಬಂಧ ಸಿಬಿಐ ಹೊಸದಾಗಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಸ್ವಯಂ ಸೇವಾ ಸಂಸ್ಥೆ ‘ಸೃಜನ್ ಮಹಿಳಾ ವಿಕಾಸ ಸಹಯೋಗ ಸಮಿತಿ’ಯ ಎಲ್ಲ ಅಧಿಕಾರಿಗಳನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ಹಗರಣ ನಡೆದ ಅವಧಿಯಲ್ಲಿದ್ದ ವ್ಯವಸ್ಥಾಪಕರು, ಬಂಕಾ ಜಿಲ್ಲೆಯ ಭೂಸ್ವಾಧೀನ ಅಧಿಕಾರಿ ವಿರುದ್ಧವೂ ಆರೋಪಪಟ್ಟಿ ದಾಖಲಿಸಲಾಗಿದೆ.

ಒಂದು ಎಫ್‌ಐಆರ್‌ನಲ್ಲಿ ಸೃಜನ್ ಅಧ್ಯಕ್ಷೆ ಶುಭಲಕ್ಷ್ಮಿ ಪ್ರಸಾದ್ ಹಾಗೂ ಇತರ 9 ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಕಳೆದ ವರ್ಷ ಈ ಹಗರಣದ ಸಂಬಂಧ ಸಿಬಿಐ 10 ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

2003ರಿಂದ 2014ರ ಅವಧಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಈ ಎನ್‌ಜಿಒ ಸರ್ಕಾರಕ್ಕೆ ₹800 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT