ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗಾಗಿ ರಾಜ್ಯಮಟ್ಟದ ಪ್ರತಿಭಾ ಸ್ಪರ್ಧೆ

Last Updated 27 ಜೂನ್ 2019, 16:08 IST
ಅಕ್ಷರ ಗಾತ್ರ

ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಶೇಷ ಪ್ರತಿಭಾ ಸ್ಪರ್ಧೆಯನ್ನು ಅಂಧರಿಗಾಗಿ ಏರ್ಪಡಿಸಲಾಗಿದೆ. ಇದು ರಾಜ್ಯ ಮಟ್ಟದ ಸ್ವರ್ಧೆಯಾಗಿದ್ದು ಜೂನ್ 29 ಮತ್ತು 30 ರಂದು ಎಚ್.ಎಸ್.ಆರ್. ಲೇಔಟ್‌ನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ನಡೆಯಲಿದೆ.

ಈ ಸ್ವರ್ಧೆಯಲ್ಲಿ ನೃತ್ಯ, ಗಾಯನ, ವಾದ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಅಂಧರು ಭಾಗವಹಿಸಬಹುದು. ಇದು 15 – 30 ವಯಸ್ಸಿನ ಒಳಗಿನವರ ಕೌಶಲಗಳನ್ನು ಅಭಿವೃದ್ಧಿಪಡಿಸುವುದು, ಉಚಿತ ತರಬೇತಿ ನೀಡುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವ ಅವಕಾಶವನ್ನು ಕಲ್ಪಿಸಿಕೊಡುವ ಒಂದು ಅದ್ಭುತ ಅವಕಾಶ. ಸ್ವರ್ಧೆ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ನೃತ್ಯ ತಂಡಗಳಿಗೆ ಕ್ರಮವಾಗಿ ₹20 ಸಾವಿರ, ₹10 ಸಾವಿರ ಹಾಗೂ ₹5ಸಾವಿರ ಬಹುಮಾನ ನೀಡಲಾಗುವುದು. ಹಾಡುಗಾರಿಕೆ, ವಾದ್ಯ ಮತ್ತು ನೃತ್ಯದಲ್ಲಿ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ₹10 ಸಾವಿರ, ₹6ಸಾವಿರ ಹಾಗೂ ₹4 ಸಾವಿರ ಬಹುಮಾನ ನೀಡಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ

ನೋಂದಣಿ/ಪಾಲ್ಗೊಳ್ಳುವಿಕೆಯ ಕುರಿತು ವಿವರಗಳಿಗಾಗಿ: 9108112308, 7019890629 ಇಮೇಲ್ - overseas@samarthanam.org

ಸ್ಥಳ: ಸಮರ್ಥನಂ ಅಂಗವಿಕಲರ ಸಂಸ್ಥೆ, ಸಿ.ಎ. 39, 15ನೇ ಕ್ರಾಸ್, 16ನೇ ಮುಖ್ಯ ರಸ್ತೆ, ಸೆಕ್ಟರ್-4, ಎಚ್.ಎಸ್.ಆರ್. ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT