ಗುರುವಾರ , ಫೆಬ್ರವರಿ 25, 2021
17 °C
ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾದ ಪ್ರಯಾಣಿಕರು * ಸುರಕ್ಷತೆಯ ಪ್ರಶ್ನೆ ಎತ್ತಿದ ಘಟನೆ

ನ್ಯಾಷನಲ್ ಕಾಲೇಜ್ ಮೆಟ್ರೊ ನಿಲ್ದಾಣದಲ್ಲಿ ಸೀಲಿಂಗ್ ಕುಸಿತ: ನಾಲ್ವರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ದ ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ಮೆಟ್ರೊ ಸೀಲಿಂಗ್‌ ಕುಸಿದಿದ್ದು, ನಾಲ್ವರು ಪ್ರಯಾಣಿಕರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ. ಸೆ.30ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಸೀಲಿಂಗ್‌ನ ಎರಡು ಶೀಟುಗಳು ಕಳೆದ ಭಾನುವಾರ ಸಂಜೆ 6.30ರ ವೇಳೆಗೆ ಕುಸಿದಿದೆ. ಎಎಫ್‌ಸಿ ಗೇಟ್‌ ಬಳಿ ನಾಲ್ವರು ಪ್ರಯಾಣಿಕರು ಬರುತ್ತಿದ್ದ ಸಂದರ್ಭದಲ್ಲಿಯೇ ಇವು ಕುಸಿದಿವೆ. ನಂತರ, ಒಂದು ಇಟ್ಟಿಗೆಯೂ ಎಎಫ್‌ಸಿ ಗೇಟ್‌ ಮೇಲೆ ಬಿದ್ದಿದೆ. ಇದರಿಂದ ಒಂದು ಎಎಫ್‌ಸಿ ಗೇಟ್‌ಗೂ ಹಾನಿ ಯಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.  

ಅಸುರಕ್ಷತೆ ಅಪಾಯ: 

‘ನ್ಯಾಷನಲ್‌ ಕಾಲೇಜಿನಂತಹ ಮೆಟ್ರೊ ನಿಲ್ದಾಣವನ್ನು ನಿತ್ಯ ಸಾವಿರಾರು ಪ್ರಯಾಣಿಕರು ಬಳಸುತ್ತಾರೆ. ಹೊರಗೆ ಮಾತ್ರ ಸ್ವಚ್ಛ ಹಾಗೂ ಸುರಕ್ಷಿತ ಎನಿಸುವಂತೆ ನಿಲ್ದಾಣ ಕಾಣಿಸುತ್ತದೆ. ನಿಲ್ದಾಣದ ಒಳಗೆ ಇಂತಹ ಘಟನೆಗಳು ನಡೆಯುತ್ತಿವೆ. ಸೀಲಿಂಗ್‌ ಕುಸಿಯುವ ಪ್ರಕರಣಗಳು ನಮ್ಮಂಥ ಪ್ರಯಾಣಿಕರಲ್ಲಿ ಹೆಚ್ಚು ಆತಂಕ ಸೃಷ್ಟಿಸುತ್ತವೆ. ನಿಲ್ದಾಣದ ನಿರ್ಮಾಣದ ವೇಳೆ ಗುಣಮಟ್ಟದ ಕಡೆಗೂ ಅಧಿಕಾರಿಗಳು ಗಮನ ಹರಿಸಬೇಕು ಎಂಬುದನ್ನು ಈ ಘಟನೆ ಒತ್ತಿ ಹೇಳಿದೆ’ ಎಂದು ಪ್ರಯಾಣಿಕ ವಿಜಯ್‌ಕುಮಾರ್‌ ಹೇಳಿದರು. 

‘ಮೆಟ್ರೊ ಪಿಲ್ಲರ್‌ಗಳು ಬಿರುಕು ಬಿಡುವ, ನಿಲ್ದಾಣಗಳಲ್ಲಿ ನೀರು ಸೋರುವ ಘಟನೆ ನಿರಂತರವಾಗಿ ನಡೆಯುತ್ತಿದ್ದು, ಅಸುರಕ್ಷತೆಯ ಭೀತಿ ಕಾಡುತ್ತಿದೆ’ ಎಂದು ಪ್ರಯಾಣಿಕರು ಹೇಳುತ್ತಾರೆ.

‘ಮಳೆಗಾಲದಲ್ಲಿ ಟಿಕೆಟ್‌ ಕೌಂಟರ್‌ಗಳು ಮತ್ತು ಪ್ಲಾಟ್‌ಫಾರಂಗಳಲ್ಲಿ ನೀರು ಸೋರುತ್ತದೆ. ಬೇರಿಂಗ್‌ನಲ್ಲಿ ದೋಷ ಕಾಣಿಸಿಕೊಳ್ಳು ವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದನ್ನೆಲ್ಲ ಗಮನಿಸಿ ಪ್ರಯಾಣಿಕರ ಸುರಕ್ಷತೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಲಕ್ಷಿಸಬಾರದು’ ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು