ಬೆಂಗಳೂರು: ಯುವಕರ ಗುಂಪೊಂದು ನಮ್ಮ ಮೆಟ್ರೊದಲ್ಲಿ ಹಾಡಿ, ಕುಣಿದು, ಗಲಾಟೆ ಮಾಡಿದ್ದಾರೆ. ಇದರಿಂದ ಮೆಟ್ರೊ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ದೂರು ನೀಡಿದ್ದಾರೆ.

ಮಾರ್ಚ್ 15ರಂದು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 11 ಯುವಕರ ಗುಂಪೊಂದು ರಾತ್ರಿ 10.57ಕ್ಕೆ ಮಾದಾವರ ನಿಲ್ದಾಣದಲ್ಲಿ ಮೆಟ್ರೊ ರೈಲಿಗೆ ಹತ್ತಿ ಗಲಾಟೆ ಸೃಷ್ಟಿಸಿದರು. ಇದರಿಂದ ಸುಮಾರು ಐದು ನಿಮಿಷ ರೈಲು ಸಂಚಾರ ವಿಳಂಬ ಮಾಡಬೇಕಾಯಿತು. ಇತರ ಪ್ರಯಾಣಿಕರಿಗೆ ಅನನುಕೂಲವಾಯಿತು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಆರ್ಸಿಎಲ್ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ, ಸಂಬಂಧಿತ ವ್ಯಕ್ತಿಗಳನ್ನು ಮೆಟ್ರೊ ರೈಲಿನಿಂದ ಇಳಿಸಿದರು. ಅವರನ್ನು ಪೊಲೀಸರಿಗೆ ಒಪ್ಪಿಸಿದರು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.