ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಮೆಲ್ ಬದಲು ಚೀನಾ ಬೋಗಿ

ನಮ್ಮ ಮೆಟ್ರೊ 2ನೇ ಹಂತಕ್ಕೆ ಬೇಕಾಗಿರುವ 216 ಬೋಗಿ ಪೂರೈಕೆ ಗುತ್ತಿಗೆ ಚೀನಾ ಕಂಪನಿ ಪಾಲು
Last Updated 22 ಫೆಬ್ರುವರಿ 2020, 23:43 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ಗೆ 216 ಬೋಗಿಗಳನ್ನು ಪೂರೈಸುವ ಗುತ್ತಿಗೆ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬೆಮೆಲ್‌) ಬದಲು ಚೀನಾ ಕಂಪನಿ ಪಾಲಾಗಿದೆ.

‘ಚೀನಾದ ಸಿಆರ್‌ಆರ್‌ಸಿ ನಾಂಜಿಂಗ್‌ ಪುಝೆನ್ ಕಂಪನಿಯು ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಈ ಬೋಗಿಗಳನ್ನು ಪೂರೈಸಲಿದೆ. ಆಂಧ್ರಪ್ರದೇಶದ ಶ್ರೀಸಿಟಿಯಲ್ಲಿ ನಿರ್ಮಾಣ ಘಟಕ ತೆರೆಯಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಮೂಲಗಳು ತಿಳಿಸಿವೆ.

‘ಜಾಗತಿಕ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದವು. ಎರಡನೇ ಅತಿ ಕಡಿಮೆ ಮೊತ್ತ ದಾಖಲಿಸಿದ್ದ ಕಂಪನಿಗಿಂತಲೂ ಚೀನಾ ಕಂಪನಿ ₹235 ಕೋಟಿಯಷ್ಟು ಕಡಿಮೆ ಮೊತ್ತವನ್ನು ನಮೂದಿಸಿತ್ತು. 2021ರ ಜೂನ್ ನಂತರ ಕಂಪನಿಯು ಬೋಗಿಗಳನ್ನು ಪೂರೈಸಲು ಆರಂಭಿಸುತ್ತದೆ. ನೇರಳೆ ಮಾರ್ಗವು ವೈಟ್‌ಫೀಲ್ಡ್‌ವರೆಗೆ ಮತ್ತು ಹಸಿರು ಮಾರ್ಗವು ಬಿಐಇಸಿವರೆಗೆ ವಿಸ್ತರಣೆಯಾಗಲಿದ್ದು, ಈ ಕಾರಿಡಾರ್‌ಗಳಲ್ಲಿ ಹೊಸ ಬೋಗಿಗಳನ್ನು ಬಳಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ, 2019ರ ಡಿಸೆಂಬರ್‌ ಒಳಗೆ ಆರು ಬೋಗಿಗಳ 150 ರೈಲುಗಳನ್ನು ಬೆಮೆಲ್‌ ಪೂರೈಸಬೇಕಾಗಿತ್ತು. ಅದರಂತೆ, 141 ರೈಲುಗಳನ್ನು ಇಲ್ಲಿಯವರೆಗೂ ಬೆಮೆಲ್‌ ಪೂರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT