ಶನಿವಾರ, ಜನವರಿ 29, 2022
18 °C

ನಮ್ಮ ಮೆಟ್ರೊ ಸಂಚಾರ ವ್ಯತ್ಯಯ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಮ್ಮ ಮೆಟ್ರೊ ರೈಲು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದರಿಂದ,  ಎಂ.ಜಿ.ರಸ್ತೆಯಿಂದ ಬೈಯ್ಯಪ್ಪನಹಳ್ಳಿ ತನಕ ರೈಲುಗಳ ಸಂಚಾರ ಶನಿವಾರ ಸಂಜೆ 5ರಿಂದ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ನೇರಳೆ ಮಾರ್ಗದಲ್ಲಿ ಕೆಂಗೇರಿ–ಎಂ.ಜಿ.ರಸ್ತೆ ನಡುವೆ ಮಾತ್ರ ರೈಲುಗಳು ಸಂಚರಿಸಿದವು. ಇದರ ಅರಿವಿಲ್ಲದೆ ಟ್ರಿನಿಟಿ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರೈಲು ಹತ್ತಲು ಬಂದ ಪ್ರಯಾಣಿಕರು ಗೊಂದಲಕ್ಕೊಳಗಾದರು. ರೈಲು ಸಂಚಾರ ವ್ಯತ್ಯಯವಾದ ಮಾಹಿತಿ ತಿಳಿದು ಬೇರೆ ವಾಹನ ಬಳಸಿದರು.

ಮೆಟ್ರೊ ರೈಲಿನಲ್ಲಿ ಹೊರಟರೆ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಬಹುದು ಎಂದುಕೊಂಡು ನಿಲ್ದಾಣಕ್ಕೆ ಬಂದವರು ತಮ್ಮ ಗುರಿ ತಲುಪಲು ಪರದಾಡಬೇಕಾಯಿತು.

ಭಾನುವಾರ ಬೆಳಿಗ್ಗೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, 7 ಗಂಟೆ ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು