ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ದುರಂತ | ಕಾಂಕ್ರೀಟ್‌ ಹಾಕಲು ವಿಳಂಬದಿಂದ ಅನಾಹುತ: ಸ್ಥಳೀಯರ ಆರೋಪ

Last Updated 11 ಜನವರಿ 2023, 19:49 IST
ಅಕ್ಷರ ಗಾತ್ರ

ಬೆಂಗಳೂರು: ಹೆಣ್ಣೂರು ಕ್ರಾಸ್‌ ಬಳಿ ಮೆಟ್ರೊ ಕಾಮಗಾರಿ ವೇಳೆ ಉರುಳಿದ ಕಬ್ಬಿಣದ ಚೌಕಟ್ಟು 16.5 ಮೀಟರ್‌ ಎತ್ತರವಿತ್ತು. ಅಂದಾಜು 40 ಟನ್‌ ತೂಕವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ಪುರ–ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ 38.44 ಕಿ.ಮೀ ಕಾಮಗಾರಿ ನಡೆಯುತ್ತಿದೆ. ಹೈದರಾಬಾದ್‌ನ ಎನ್‌ಸಿಸಿ ಸಂಸ್ಥೆಯ ಮೂರು ಹಂತದಲ್ಲಿ ಕಾಮಗಾರಿ ಕೈಗೆತ್ತಿಗೊಂಡಿದೆ.

ಬೆನ್ನಿಗಾನಹಳ್ಳಿ–ಕೆಂಪಾಪುರ, ಕೆಂಪಾಪುರ–ಯಲಹಂಕ ಏರ್‌ ಫೋರ್ಸ್‌, ಐಎಎಫ್‌–ವಿಮಾನ ನಿಲ್ದಾಣದ ನಡುವೆ ₹ 9,583.54 ಕೋಟಿ ಮೊತ್ತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ಘಟನೆಯಿಂದ ಕಾಮಗಾರಿ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.

‘ಈ ಮಾರ್ಗದಲ್ಲಿ ಕಬ್ಬಿಣದ ಚೌಕಟ್ಟು ನಿಲ್ಲಿಸಿ ಹಲವು ದಿನ ಕಳೆದಿದ್ದರೂ ಅದಕ್ಕೆ ಕಾಂಕ್ರೀಟ್‌ ಹಾಕಿರಲಿಲ್ಲ. ಭಾರ ಹೆಚ್ಚಾಗಿ ವಾಲಿಕೊಂಡಿತ್ತು. ಇತರೆ ಚೌಕಟ್ಟುಗಳಿಗಿಂತ ಉರುಳಿ ಬಿದ್ದ ಚೌಕಟ್ಟು ತುಸು ಎತ್ತರವಾಗಿತ್ತು. ಕಬ್ಬಿಣ ವಾಲಿಕೊಂಡಿದ್ದರೂ ಅದನ್ನು ಬೀಳದಂತೆ ತಡೆಯುವುದಕ್ಕೆ ಮುನ್ನೆಚ್ಚರಿಕೆ ವಹಿಸಿರಲಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT