ಮಂಗಳವಾರ, ಜನವರಿ 18, 2022
24 °C

ಮೆಟ್ರೊ: ಎರಡು ಸುರಂಗ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೀಚ್‌–6 ಮೆಟ್ರೊ ರೈಲು ಮಾರ್ಗದಲ್ಲಿ ಸುರಂಗ ಕೊರೆಯುವ ಎರಡು ಯಂತ್ರಗಳು (ಟಿಬಿಎಂ) ಜನವರಿ ಮೊದಲ ವಾರದಲ್ಲಿ ಪ್ರಗತಿ ಸಾಧಿಸಿವೆ.

2021ರ ಜೂನ್ 29ರಂದು ಸುರಂಗ ಕೊರೆಯಲು ಆರಂಭಿಸಿದ್ದ ‘ವಮಿಕ’ ಹೆಸರಿನ ಟಿಬಿಎಂ, ದಕ್ಷಿಣ ರ್‍ಯಾಂಪ್‌ (ಜಯನಗರ ಅಗ್ನಿಶಾಮಕ ಠಾಣೆ ಬಳಿ) ಮತ್ತು ಡೈರಿ ಸರ್ಕಲ್ ನಡುವಿನ 614 ಮೀಟರ್ ಸುರಂಗ ಕೊರೆಯುವುದುನ್ನು ಪೂರ್ಣಗೊಳಿಸಿದೆ. ಲಕ್ಕಸಂದ್ರ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ‘ವಮಿಕ’ ಮುಂದುವರಿಸಲಿದೆ.

2020ರ ಸೆ.5ರಂದು ಶಿವಾಜಿನಗರ ಮೆಟ್ರೊ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿದ ‘ಅವನಿ’ ಹೆಸರಿನ ಯಂತ್ರ, 1,086 ಮೀಟರ್‌ ಕಾಮಗಾರಿ ಪೂರ್ಣಗೊಳಿಸಿ ಎಂ.ಜಿ ರಸ್ತೆ ನಿಲ್ದಾಣವನ್ನು ಗುರುವಾರ ತಲುಪಿತು.

‘280 ಮೀಟರ್ ಉದ್ದದಲ್ಲಿ ಸಿಕ್ಕಿದ್ದ ಗಟ್ಟಿ ಬಂಡೆಗಳನ್ನು ಕೊರೆಯುವ ಸವಾಲಿನ ಕೆಲಸವನ್ನೂ ಇದು ಪೂರ್ಣಗೊಳಿಸಿದೆ. ಎಂ.ಜಿ. ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಿಲ್ದಾಣದ ಕಡೆಗೆ ಕಾರ್ಯಾಚರಣೆ ಮುಂದುವರಿಸಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು