ಬೆಂಗಳೂರು: ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ್ದ ಬಸ್ ಮುಂದಕ್ಕೆ ಚಲಿಸಿ, ಬಿಎಂಟಿಸಿ ಸಂಚಾರ ನಿಯಂತ್ರಕರ ಕಚೇರಿಗೆ ಡಿಕ್ಕಿ ಹೊಡೆದಿದೆ. ಕಚೇರಿ ಮತ್ತು ಬಸ್ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಪೀಣ್ಯ ಕೈಗಾರಿಕಾ ಪ್ರದೇಶದ 3ನೇ ಹಂತದ, 3ನೇ ಮುಖ್ಯ ರಸ್ತೆಯಲ್ಲಿರುವ ಬಿಎಂಟಿಸಿ ಘಟಕ– 22ರಲ್ಲಿ ಶುಕ್ರವಾರ ಬೆಳಿಗ್ಗೆ ಈ ಅಪಘಾತ ನಡೆದಿದೆ. ಖಾಸಗಿ ಒಡಂಬಡಿಕೆಯ ಪ್ರಾವೀಸ್ ಕಂಪನಿಯ ಎಲೆಕ್ಟ್ರಿಕ್ ಬಸ್ನ ಚಾಲಕ ಹ್ಯಾಂಡ್ಬ್ರೇಕ್ ಹಾಕದೇ ಬಸ್ ನಿಲ್ಲಿಸಿ ಕೆಳಗೆ ಇಳಿದಿದ್ದರು. ಗೇಟ್ನಲ್ಲಿ ಸಹಿ ಹಾಕಿ ವಾಪಸ್ ಬಂದು ಬಸ್ ಒಯ್ಯಬೇಕಿತ್ತು. ಅಷ್ಟರ ಒಳಗೆ ಬಸ್ ಮುಂದಕ್ಕೆ ಚಲಿಸಿತ್ತು. ಸಂಚಾರ ನಿಯಂತ್ರಕರ ಕಚೇರಿ ಬಳಿ ನಿಲ್ಲಿಸಿದ್ದ ಬಿಎಂಟಿಸಿ ಸಿಬ್ಬಂದಿಯ ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿ ಮುಂದಕ್ಕೆ ನುಗ್ಗಿ ಕಚೇರಿಗೆ ಡಿಕ್ಕಿ ಹೊಡೆಯಿತು. ಕಚೇರಿಯ ಗೋಡೆ ಬಿರುಕು ಬಿಟ್ಟಿದ್ದು, ಕಿಟಕಿಗಳು ಒಡೆದು ಹೋಗಿವೆ. ದ್ವಿಚಕ್ರ ವಾಹನಗಳು ಜಖಂಗೊಂಡಿವೆ ಎಂದು ಬಿಎಂಟಿಸಿ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.