ಗುರುವಾರ , ಫೆಬ್ರವರಿ 25, 2021
29 °C

ವಿದ್ಯಾರ್ಥಿ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2018–19ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ಮಾನ್ಯತೆಯ ಅವಧಿಯನ್ನು ಬಿಎಂಟಿಸಿ ಇದೇ 8ರವರೆಗೆ ವಿಸ್ತರಿಸಿದೆ. ಹೊಸ ಪಾಸ್ ಪಡೆಯದ ವಿದ್ಯಾರ್ಥಿಗಳು ಇನ್ನೂ ಏಳು ದಿನ ಹಳೇ ಪಾಸ್‌ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

15 ಬಸ್ ನಿಲ್ದಾಣಗಳ 50 ಕೌಂಟರ್‌ಗಳಲ್ಲಿ ಜೂನ್‌ 17ರಿಂದ ಪಾಸ್ ವಿತರಣೆ ಮಾಡಲಾಗುತ್ತಿದೆ. 76,700 ಅರ್ಜಿಗಳು ಬಂದಿದ್ದು, 21,600 ಪಾಸ್‌ಗಳನ್ನು ವಿತರಿಸಲಾಗಿದೆ.

ಪಾಸ್ ಪಡೆಯುವ ತನಕ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಹಳೇ ಪಾಸ್ ಅವಧಿ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ವಿಳಂಬ ಮಾಡದೆ ಹೊಸ ಪಾಸ್ ಪಡೆದುಕೊಳ್ಳಬೇಕು ಎಂದು ಬಿಎಂಟಿಸಿ ಮನವಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು