ನಿರ್ವಾಹಕನ ವಿರುದ್ಧ ಬಿಎಂಟಿಸಿಗೆ ದೂರು

7
ಹಿರಿಯ ನಾಗರಿಕರೊಬ್ಬರ ಜತೆ ವಾಗ್ವಾದ

ನಿರ್ವಾಹಕನ ವಿರುದ್ಧ ಬಿಎಂಟಿಸಿಗೆ ದೂರು

Published:
Updated:
Deccan Herald

ಬೆಂಗಳೂರು: ಇಳಿಯುವ ತಾಣವನ್ನು ತಪ್ಪಾಗಿ ನಮೂದಿಸಿ ಹಿರಿಯ ನಾಗರಿಕರೊಬ್ಬರ ಜತೆ ವಾಗ್ವಾದ ನಡೆಸಿದ ಆರೋಪದ ಮೇಲೆ ಬಿಎಂಟಿಸಿ ನಿರ್ವಾಹಕರೊಬ್ಬರ ವಿರುದ್ಧ ಹರ್‌ಪ್ರೀತ್‌ ಕೌರ್‌ ಎಂಬುವವರು ಸಂಸ್ಥೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

‘ನನ್ನ ತಂದೆ ಮಾರ್ಗ ಸಂಖ್ಯೆ 401ರ ಬಸ್‌ನಲ್ಲಿ (ನೋಂದಣಿ ಸಂಖ್ಯೆ: ಕೆಎ 01 ಎಫ್‌9472) ಸೆ. 1ರಂದು ಬೆಳಿಗ್ಗೆ 9.10ಕ್ಕೆ ವಿದ್ಯಾರಣ್ಯಪುರದಿಂದ ರಾಮಯ್ಯ ಕಾಲೇಜು ಸ್ಟಾಪ್‌ಗೆ ಪ್ರಯಾಣಿಸಲು ಟಿಕೆಟ್‌ ಕೇಳಿದರು. ಆದರೆ, ನಿರ್ವಾಹಕ ನಂಜಪ್ಪ ವೃತ್ತ ಸ್ಟಾಪ್‌ಗೆ ಟಿಕೆಟ್‌ ಕೊಟ್ಟರು. ವ್ಯತ್ಯಾಸವನ್ನು ಸರಿಪಡಿಸುವಂತೆ ಕೋರಿದಾಗ ಅನಗತ್ಯ ವಾಗ್ವಾದ ನಡೆಸಿದರು’ ಎಂದು ತಿಳಿಸಿದ್ದಾರೆ.

‘ಕನ್ನಡ ಬಾರದ ನನ್ನ ತಂದೆಗೆ ಕನ್ನಡದಲ್ಲಿ ಮಾತನಾಡಿ. ಇಲ್ಲಿ ಬಂದು ಯಾವುದೋ ಭಾಷೆಯಲ್ಲಿ ಮಾತನಾಡುತ್ತಾ ನಮ್ಮೊಂದಿಗೆ ವಾದಿಸುತ್ತೀರಾ’ ಎಂದು ಕಟುವಾಗಿ ಕೇಳಿದರು. ಇಂಥ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !