ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ‘ಚಿಲ್ಲರೆ’ ವಿಷಯ: ಬಿಎಂಟಿಸಿ ನಿರ್ವಾಹಕ ಅಮಾನತು

Published : 9 ಆಗಸ್ಟ್ 2024, 21:44 IST
Last Updated : 9 ಆಗಸ್ಟ್ 2024, 21:44 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರಯಾಣಿಕರೊಬ್ಬರಿಗೆ ₹ 5 ಚಿಲ್ಲರೆ ವಾಪಸ್‌ ನೀಡುವ ವಿಚಾರದಲ್ಲಿ ಅನುಚಿತವಾಗಿ ವರ್ತಿಸಿದ ಬಿಎಂಟಿಸಿ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ.

ಮಂಗಳವಾರ ರಾತ್ರಿ 9.40ಕ್ಕೆ ಹೆಬ್ಬಾಳದಿಂದ ಚಂದ್ರಾಪುರಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಘಟಕ–32ರ ಬಸ್‌ನಲ್ಲಿ ಅಭಿನವ್‌ರಾಜ್‌ ಪ್ರಯಾಣಿಸುತ್ತಿದ್ದರು. ಅವರಿಗೆ ನಿರ್ವಾಹಕ ಶ್ರೀನಿವಾಸ್‌ ₹ 5 ಚಿಲ್ಲರೆ ನೀಡಬೇಕಿತ್ತು. ಅದನ್ನು ಕೇಳಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದರು ಎಂದು ಪ್ರಯಾಣಿಕ ದೂರಿದ್ದರು.

ಪ್ರಯಾಣಿಕರ ಸುರಕ್ಷತೆಗೆ ಬಿಎಂಟಿಸಿ ಪ್ರಾಶಸ್ತ್ಯ ನೀಡುತ್ತದೆ. ಪ್ರಯಾಣಿಕರಲ್ಲಿ ಸುರಕ್ಷಿತ ಭಾವ ಬರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಸ್‌ನಲ್ಲಿ ನಿರ್ವಾಹಕ ಅನುಚಿತವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT