ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ: ವಾರದಲ್ಲಿ ಬರಲಿದೆ ಮೊದಲ ಇ–ಬಸ್

Last Updated 24 ಸೆಪ್ಟೆಂಬರ್ 2021, 22:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರದ ಕನಸು ಸಾಕಾರವಾಗುವ ಕಾಲ ಸನ್ನಿಹಿತವಾಗಿದ್ದು, ಮುಂದಿನ ವಾರದಲ್ಲಿ ನಗರಕ್ಕೆ ಮೊದಲ ಎಲೆಕ್ಟ್ರಿಕ್ ಬಸ್ ಬರಲಿದೆ.

‘ಮೊದಲ ಹಂತದಲ್ಲಿ ಒಂದು ಬಸ್‌ ಬೆಂಗಳೂರಿಗೆ ಸೆ.30ರಂದು ಬರಲಿದೆ ಎಂದು ಕಂಪನಿ ತಿಳಿಸಿದೆ. ಉಳಿದ ಬಸ್‌ಗಳು ಹಂತ– ಹಂತವಾಗಿ ಬರಲಿವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2020 ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಅದರ ಪ್ರಕಾರ ಆರು ತಿಂಗಳಲ್ಲೇ ಬಸ್‌ಗಳು ರಸ್ತೆಗೆ ಇಳಿಯಬೇಕಿತ್ತು. ಕೋವಿಡ್ ಕಾರಣದಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ 2021ರ ಫೆಬ್ರುವರಿಯಲ್ಲಿ ಎನ್‌ಟಿಪಿಸಿ–ಜೆಬಿಎಂ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ಬಸ್‌ಗಳನ್ನು ಪಡೆಯಲಾಗುತ್ತಿದೆ.

30ರಿಂದ 35 ಸೀಟುಗಳನ್ನು ಹೊಂದಿರುವ 9 ಮೀಟರ್ ಉದ್ದದ ಈ ಬಸ್‌ಗಳನ್ನು ಪ್ರತಿ ಕಿಲೋ ಮೀಟರ್‌ಗೆ ₹51 ದರದಲ್ಲಿ ಪಡೆಯಲಾಗುತ್ತಿದೆ. ಒಂದು ಬಾಗಿಲನ್ನು ಹೊಂದಿರುವ ಈ ಬಸ್‌ಗಳು ಎಲ್ಲ ಮೆಟ್ರೊ ನಿಲ್ದಾಣಗಳಿಂದ ಫೀಡರ್ ಸೇವೆಗಳಾಗಿ ಮಾತ್ರ ಬಳಕೆ ಮಾಡಲು ಈ ಹಿಂದೆಯೇ ಬಿಎಂಟಿಸಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT