ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮದೊಂದಿಗೆ ಮಾತನಾಡಿದ್ದಕ್ಕೆ ಬಿಎಂಟಿಸಿ ಉದ್ಯೋಗಿ ಅಮಾನತು: ಖಂಡನೆ

Published 14 ಆಗಸ್ಟ್ 2023, 21:10 IST
Last Updated 14 ಆಗಸ್ಟ್ 2023, 21:10 IST
ಅಕ್ಷರ ಗಾತ್ರ

ಬೆಂಗಳೂರು: ಮಾಧ್ಯಮಗಳ ಮುಂದೆ ತಮ್ಮ ಸಮಸ್ಯೆ ಕುರಿತು ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಬಿಎಂಟಿಸಿ ಉದ್ಯೋಗಿಯನ್ನು ಅಮಾನತು ಮಾಡಿರುವುದನ್ನು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಖಂಡಿಸಿದೆ.

ನಿರ್ವಾಹಕ ರಂಗನಾಥ್‌ ಎಂಬವರು ಬಸ್ ಡಿಪೊದಲ್ಲಿ ವಿಷ ಸೇವಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರು ಬಿಎಂಟಿಸಿ ಉದ್ಯೋಗಿ ಬಿ.ಎಸ್. ರಜನಿಕಾಂತ್‌ ಅವರನ್ನು ಮಾತನಾಡಿಸಿದ್ದರು. ‘ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಜೆ, ಇತರ ಸಮಸ್ಯೆಗಳ ಬಗ್ಗೆ ಎಂಡಿ ಮೇಡಂ ಅವರು ಸಂಘಟನೆ ಜೊತೆಗೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ಆಗ ಹೇಳಿಕೆ ನೀಡಿದ್ದರು. ಸಮಸ್ಯೆಯನ್ನು ಬಗೆಹರಿಸುವುದು ಬಿಟ್ಟು  ಇದನ್ನೇ ಕಾರಣವಾಗಿ ಇಟ್ಟುಕೊಂಡು ಅಮಾನತು ಮಾಡಿರುವುದು ಸರಿ ಅಲ್ಲ’ ಎಂದು ಫೆಡರೇಶನ್‌ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT