ಸೋಮವಾರ, ಮಾರ್ಚ್ 1, 2021
17 °C

ಬಿಎಂಟಿಸಿ ನೌಕರರ ಪ್ರೋತ್ಸಾಹ ಭತ್ಯೆಗೆ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೌಕರರಿಗೆ ಈ ತಿಂಗಳು ಅರ್ಧ ಸಂಬಳ ನೀಡಿರುವ ಸಾರಿಗೆ ಸಂಸ್ಥೆಗಳು, ಈಗ ಪ್ರೋತ್ಸಾಹ ಭತ್ಯೆ ಮತ್ತು ಊಟದ ಬಾಟಾ ತಡೆ ಹಿಡಿಯಲು ಮುಂದಾಗಿವೆ.

ಈ ಸಂಬಂಧ ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ. ‘ಕೋವಿಡ್ ಕಾರಣದಿಂದ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ಷರತ್ತುಗಳಂತೆ ನೌಕರರಿಗೆ ವೇತನ ಹೊರತುಪಡಿಸಿ ಬೇರೆ ಯಾವ ಭತ್ಯೆ ನೀಡಲು ಆಗುವುದಿಲ್ಲ. ಆದ್ದರಿಂದ ಸರ್ಕಾರದ ಮುಂದಿನ ಆದೇಶದ ತನಕ ಭತ್ಯೆ ಪಾವತಿಸಕ್ಕದಲ್ಲ’ ಎಂದು ತಿಳಿಸಿದೆ.

‘ಡಿಸೆಂಬರ್ ತಿಂಗಳ ಸಂಬಳದಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಅರ್ಧದಷ್ಟು ಸಂಬಳವನ್ನು ಸಾರಿಗೆ ಸಂಸ್ಥೆಗಳು ಪಾವತಿಸಿವೆ. ಈಗ ಭತ್ಯೆಗಳನ್ನೂ ಕಡಿತ ಮಾಡುತ್ತಿದೆ. ಜೀವನ ಸಾಗಿಸುವುದು ಹೇಗೆ’ ಎಂಬುದು ನೌಕರರ ಪ್ರಶ್ನೆ.

‘ಊಟದ ಬಾಟಾ ಎಂದು ದಿನಕ್ಕೆ ₹35 ಮತ್ತು ಎಲ್ಲಾ ಟ್ರಿಪ್‌ಗಳಿಗೂ ಸೇರಿ ₹35 ಪ್ರೋತ್ಸಾಹ ಭತ್ಯೆ ನೀಡಲಾಗುತ್ತಿತ್ತು. ಅದನ್ನೂ ನೀಡದಿದ್ದರೆ ಚಾಲಕ ಮತ್ತು ನಿರ್ವಾಹಕರು ಊಟ, ಉಪಾಹಾರ ಮಾಡುವುದು ಹೇಗೆ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರಶ್ನಿಸಿದರು.

‘ಪ್ರತಿಭಟನೆಯ ಸಂಧಾನ ಸಭೆಯಲ್ಲಿ ಎಲ್ಲಾ ರೀತಿಯ ಭತ್ಯೆಗಳನ್ನೂ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಈಗ ಭತ್ಯೆ ಕಡಿತ ಮಾಡುತ್ತಿದೆ’ ಎಂದು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು