ಬಿಎಂಟಿಸಿ ಸಂದರ್ಶನ: ಅಭ್ಯರ್ಥಿಗಳ ಪರದಾಟ

7

ಬಿಎಂಟಿಸಿ ಸಂದರ್ಶನ: ಅಭ್ಯರ್ಥಿಗಳ ಪರದಾಟ

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ(ಬಿಎಂಟಿಸಿ) ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು ಮೂಲ ಸೌಕರ್ಯದ ಕೊರತೆಯಿಂದ ಪರದಾಡುತ್ತಿದ್ದಾರೆ.

ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ ಹಾಗೂ ಭದ್ರತಾ ರಕ್ಷಕ ಹುದ್ದೆಗಳ ಭರ್ತಿಗಾಗಿ ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಆಹ್ವಾನಿಸಿ ಶಾಂತಿನಗರದ ಡಿಪೊ ನಂಬರ್–1ರಲ್ಲಿ ಸಂದರ್ಶನ ಆರಂಭಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಸಂದರ್ಶನಕ್ಕೆ ಬಂದಿದ್ದಾರೆ.

‘ಡಿಪೊ ನಂಬರ್‌ 1ರಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಆಸನಗಳಿಲ್ಲ. ಮೈದಾನದಲ್ಲಿ ನಿಂತುಕೊಂಡು  ಸಂದರ್ಶನಕ್ಕಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಮಳೆ ಸುರಿದಿದ್ದರಿಂದ ಮತ್ತಷ್ಟು ತೊಂದರೆ ಉಂಟಾಯಿತು’ ಎಂದು ಅಭ್ಯರ್ಥಿಯೊಬ್ಬರು ದೂರಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !