ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌: ಪಾಸ್‌ ಇದ್ದವರಿಗೆ ಮಾತ್ರ ಅವಕಾಶ !

ರಸ್ತೆಗಿಳಿಯಲಿವೆ ಎರಡು ಸಾವಿರ ಬಸ್ * ನಿಂತು ಪ್ರಯಾಣಿಸಲು ಅವಕಾಶವಿಲ್ಲ
Last Updated 18 ಮೇ 2020, 21:43 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಬಸ್‌ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿರುವುದರಿಂದ ಮೊದಲ ಹಂತವಾಗಿ ಬಿಎಂಟಿಸಿಯ ಎರಡು ಸಾವಿರ ಬಸ್‌ಗಳು ಮಂಗಳವಾರ ಸಂಚಾರ ನಡೆಸಲಿವೆ. ಆದರೆ, ಪಾಸ್‌ ಹೊಂದಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇದೆ ಎಂದು ಬಿಎಂಟಿಸಿ ಹೇಳಿದೆ. ಅಲ್ಲದೆ, ಮುಖಗವಸು ಧರಿಸದವರ ಪ್ರಯಾಣಕ್ಕೂ ಅವಕಾಶ ನೀಡಲಾಗುವುದಿಲ್ಲ ಎಂದೂ ತಿಳಿಸಿದೆ.

ದಿನದ ಪಾಸ್‌ಗೆ ₹70, ವಾರದ ಪಾಸ್‌ಗೆ ₹300 ಹಾಗೂ ಮಾಸಿಕ ಪಾಸುಗಳಿಗೆ ಈ ಮೊದಲಿದ್ದ ದರವನ್ನೇ ಮುಂದುವರಿಸಲಾಗಿದೆ. ವ್ಯಕ್ತಿಗತ ಅಂತರವನ್ನು ಕಾಪಾಡುವ ಉದ್ದೇಶದಿಂದ ಪಾಸ್‌ ಹೊಂದಿದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.

‘ದಿನದ ಪಾಸ್‌ಗಳನ್ನು ನಿರ್ವಾಹಕರಿಂದಲೇ ಖರೀದಿಸಬಹುದು. ವಾರದ ಅಥವಾ ಮಾಸಿಕ ಪಾಸ್ ಆಯಾ ನಿಲ್ದಾಣಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವಿತರಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಚಾಲಕರ ಮತ್ತು ನಿರ್ವಾಹಕರ ಆರೋಗ್ಯ ತಪಾಸಣೆ ನಡೆಸಿದ ನಂತರವೇ, ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಎಲ್ಲರಿಗೂ ಮುಖ–ಕೈಗವಸು, ಸ್ಯಾನಿಟೈಸರ್‌ ವಿತರಿಸಲಾಗುವುದು’ ಎಂದು ಅವರು ತಿಳಿಸಿದರು.

‘ಹೆಚ್ಚು ಜನರು ಸಂಚರಿಸುವ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ಮೊದಲು ಸೇವೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ನಿಂತು ಪ್ರಯಾಣಿಸುವಂತಿಲ್ಲ:‘ಬಸ್‌ಗಳ ಆಸನ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಶಿಖಾ ತಿಳಿಸಿದರು.

ಪಾಸ್‌ ಕಡ್ಡಾಯ: ವಿರೋಧ

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವುದಕ್ಕೆ ಬಸ್‌ ಪಾಸ್‌ ಕಡ್ಡಾಯ ಮಾಡಿರುವ ಬಿಎಂಟಿಸಿ ನಿರ್ಧಾರಕ್ಕೆಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ (ಬಿಬಿಪಿವಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಮನೆಗೆಲಸದವರು, ಗಾರ್ಮೆಂಟ್‌ ನೌಕರರು ಬಸ್‌ ಸೇವೆ ಪ್ರಾರಂಭವಾಗಲು ಕಾಯುತ್ತಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಅವರು ಪಾಸ್‌ಗೆ ದಿನಕ್ಕೆ ₹70 ಭರಿಸಲು ಅವರಿಗೆ ಸಾಧ್ಯವಾಗುತ್ತದೆಯೇ’ ಎಂದು ವೇದಿಕೆ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT