ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: BMTC ಪಾಸ್ ವಿತರಣೆ ಗೊಂದಲ- ವಿದ್ಯಾರ್ಥಿಗಳ ಪರದಾಟ

Last Updated 29 ಡಿಸೆಂಬರ್ 2021, 16:33 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಡಿ.31 ಕಡೆಯ ದಿನವಾಗಿದ್ದು, ಬೆಂಗಳೂರು ಒನ್ ಕಚೇರಿಗಳಿಗೆ ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದಾರೆ. ಇದರ ನಡುವೆ ಕೆಲವೆಡೆ ಸರ್ವರ್ ಸಮಸ್ಯೆಯಿಂದ ಪಾಸ್ ವಿತರಣೆ ಸ್ಥಗಿತಗೊಂಡು ವಿದ್ಯಾರ್ಥಿಗಳು ಪರದಾಡಿದರು.

ಪಾಸ್ ವಿತರಣೆ ಕಾರ್ಯವನ್ನು ಆರಂಭವಾದ ಅರ್ಧಗಂಟೆಯಲ್ಲೇ ಸ್ಥಗಿತಗೊಳಿಸಲಾಗಿತ್ತು. ಜೆ.ಪಿ.ನಗರದ ಬೆಂಗಳೂರು ಒನ್ ಕಚೇರಿ ಎದುರು ವಿದ್ಯಾರ್ಥಿಗಳು ಬುಧವಾರ ಸಾಲುಗಟ್ಟಿ ನಿಂತಿದ್ದರು.

‘ಸರ್ವರ್ ಸಮಸ್ಯೆ, ಕಾರ್ಡ್‌ಗಳು ಕೂಡ ಕಡಿಮೆ ಇವೆ ಎಂದು ಬೆಂಗಳೂರು ಒನ್ ಕಚೇರಿ ಸಿಬ್ಬಂದಿ ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಪಾಸ್‌ಗಾಗಿ ಪ್ರತಿದಿನ ಅಲೆದಾಡಬೇಕಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಪಾಸ್ ವಿತರಣೆಗೆ ಡಿ.31ಕ್ಕೆ ಕಡೆ ದಿನವಾಗಿದ್ದು, ಅಷ್ಟರಲ್ಲೇ ಪಾಸ್ ಪಡೆದುಕೊಳ್ಳಬೇಕಿದೆ. ಪಾಸ್ ಸಿಗದಿದ್ದರೆ ವರ್ಷವಿಡಿ ಹಣ ಪಾವತಿಸಿ ಪ್ರಯಾಣ ಮಾಡಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮೊದಲೇ ಸಮಯ ನಿಗದಿ ಮಾಡಿಕೊಂಡು ಬರುವ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲು ವಿಳಂಬ ಮಾಡುವುದಿಲ್ಲ. ಹೀಗೆ ಮಾಡದೆ ನೇರವಾಗಿ ಕಚೇರಿಗೆ ಬಂದವರಿಗೆ ತೊಂದರೆ ಆಗಿರಬಹುದು. ಕಾರ್ಡ್‌ಗಳ ಕೊರತೆ ಇಲ್ಲ. ಅವಧಿ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಪಾಸ್ ವಿತರಣೆ ಜವಾಬ್ದಾರಿ ನಿರ್ವಹಿಸುವ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT