ಭಾನುವಾರ, ಏಪ್ರಿಲ್ 2, 2023
33 °C

ಬಿಎಂಟಿಸಿ: 18 ಅಧಿಕಾರಿಗಳ ಸಾಮೂಹಿಕ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲು ಮಾಡಿದ್ದ ಪ್ರಕರಣ ಬಯಲಾದ ಬೆನ್ನಲ್ಲೇ ಸಂಸ್ಥೆಯ ಕೇಂದ್ರ ಕಚೇರಿಯ ಪ್ರಮುಖ ಹುದ್ದೆಯಲ್ಲಿದ್ದ 18 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಆದೇಶ ಹೊರಡಿಸಿದ್ದಾರೆ.

‌ವಿಭಾಗೀಯ ಸಂಚಾರ ಅಧಿಕಾರಿ(ಸಂಚಾರ ವಾಣಿಜ್ಯ ಶಾಖೆ) ಆಗಿದ್ದ ಶ್ಯಾಮಲಾ ಮುದ್ದೋಡಿ ಅವರನ್ನು ಪಶ್ಚಿಮ ವಲಯದ ವಿಭಾಗೀಯ ಸಂಚಾರ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸಹಾಯಕ ಸಂಚಾರ ಅಧೀಕ್ಷಕಿ(ಸಂಚಾರ ವಾಣಿಜ್ಯ ಶಾಖೆ) ಟಿ. ಅನಿತಾ ಅವರನ್ನು ಉತ್ತರ ವಲಯದ ಘಟಕ- 26ಕ್ಕೆ, ಸಂಚಾರ ನಿರೀಕ್ಷಕ (ಸಂಚಾರ ವಾಣಿಜ್ಯ ಶಾಖೆ) ಸತೀಶ್ ಅವರನ್ನು ಉತ್ತರ ವಲಯ ಘಟಕ- 30ಕ್ಕೆ ವರ್ಗಾಯಿಸಲಾಗಿದೆ.

ಸಹಾಯಕ ಸಂಚಾರ ನಿರೀಕ್ಷಿಕರಾಗಿದ್ದ ವಿ. ಗುಣಶೀಲ, ಸಂಚಾರ ನಿಯಂತ್ರಕ (ಸಂಚಾರ ವಾಣಿಜ್ಯ ಶಾಖೆ) ಲಕ್ಷ್ಮೀನಾರಾಯಣ, ಸಹಾಯಕ ಲೆಕ್ಕಿಗ ಗಣಪಯ್ಯ ಪಾಟೀಲ, ಸಹಾಯಕಿಯರಾದ ಎಸ್. ಸುದೇವಿ ಮತ್ತು ಬಿ.ಎಸ್. ಲತಾ, ಕಿರಿಯ ಸಹಾಯಕ ಪ್ರಸನ್ನಕುಮಾರ ಅಂಗಡಿ, ಕುಶಲಕರ್ಮಿ ಎಸ್.ಬಿ. ಪರಮೇಶ್ವರ ಅವರನ್ನು ವರ್ಗಾವಣೆ ಮಾಡಲಾಗಿದೆ.

ವಿಭಾಗೀಯ ಸಂಚಾರ ಅಧಿಕಾರಿ (ಪಶ್ಚಿಮ ವಲಯ) ಎಸ್.ವಿ. ಪ್ರತಿಮಾ ಅವರನ್ನು ಕೇಂದ್ರ ಕಚೇರಿಯ ವಿಭಾಗೀಯ ಸಂಚಾರ ಅಧಿಕಾರಿಯಾಗಿ(ಸಂಚಾರ ವಾಣಿಜ್ಯ ಶಾಖೆ), ಘಟಕ- 26ರಲ್ಲಿ ಸಹಾಯಕ ಸಂಚಾರ ಅಧೀಕ್ಷಕರಾಗಿದ್ದ ಮೋಹನ್ ಬಾಬು ಅವರನ್ನು ಸಹಾಯಕ ಸಂಚಾರ ಅಧೀಕ್ಷಕ(ಸಂಚಾರ ವಾಣಿಜ್ಯ ಶಾಖೆ) ಹುದ್ದೆಗೆ, ಶಾಂತಿನಗರ ಟಿಟಿಎಂಸಿಯಲ್ಲಿ ಸಂಚಾರ ನಿಯಂತ್ರಕರಾಗಿರುವ ರಮೇಶ್ ಅವರನ್ನು ಸಂಚಾರ ನಿಯಂತ್ರಕ(ಸಂಚಾರ ವಾಣಿಜ್ಯ ಶಾಖೆ) ಹುದ್ದೆಗೆ, ಘಟಕ- 30ರ ಸಂಚಾರ ನಿರೀಕ್ಷಕಿ ಚೇತನಾ ಅವರನ್ನು ಸಂಚಾರ ನಿರೀಕ್ಷಕಿಯಾಗಿ (ಸಂಚಾರ ವಾಣಿಜ್ಯ ಶಾಖೆ) ವರ್ಗಾವಣೆ ಮಾಡಲಾಗಿದೆ.

ಕಚೇರಿ ಸಹಾಯಕ ಜಿ.ಕಾರ್ತಿಕ, ಎನ್. ಮುನಿರಾಜ, ಸಹಾಯಕ ಸಂಚಾರ ನಿರೀಕ್ಷಕಿ (ಸಂಚಾರ ಕಾರ್ಯಾಚರಣೆ) ಪವಿತ್ರಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ಸ್ಥಳ ನಿಯೋಜನೆ ಮಾಡಿಲ್ಲ. ನಿರ್ವಾಹಕಿ- 10051 ಎಸ್. ಮಂಜುಳಾ ಅವರನ್ನು ಒಒಡಿ ಹಿಂಪಡೆದು, ಮೂಲ ಹುದ್ದೆ ಘಟಕ- 13ರಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

‘ವರ್ಗಾವಣೆಗೊಂಡವರಲ್ಲಿ ಕೆಲವರು ಸಹಿ ನಕಲು ಪ್ರಕರಣಕ್ಕೆ ಸಹಕರಿಸಿದವರು ಇದ್ದಾರೆ. ಅಂತಹವರನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಕೆಲವರು ವರ್ಗಾವಣೆಯಿಂದ ತಪ್ಪಿಸಿಕೊಂಡಿದ್ದಾರೆ’ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು