ಬೆಂಗಳೂರು: ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಅದಕ್ಕೆ ಅನುಗುಣವಾಗಿ ಬಿಎಂಟಿಸಿ ಬಸ್ ಮಾರ್ಗಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಇದ್ದ ಬಿಎಂಟಿಸಿ ಕಾರ್ಯಾಚರಣೆಯನ್ನು ಈಗ ಜಿಬಿಎ ವ್ಯಾಪ್ತಿಗೆ ಅನುಗುಣವಾಗಿ 40 ಕಿ.ಮೀ.ಗೆ ವಿಸ್ತರಿಸಲಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ ‘ವಜ್ರ ವಿಸ್ತಾರ’ ಹವಾನಿಯಂತ್ರಿತ ಬಸ್ಗಳ ಸಂಚಾರಕ್ಕೆ ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಬಿಎಂಟಿಸಿ ವ್ಯವಸ್ಥಾಪನ ನಿರ್ದೇಶಕ ಕೆ.ಬಿ. ಶಿವಕುಮಾರ್, ರಾಮನಗರ, ಕನಕಪುರದ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಮೆಜೆಸ್ಟಿಕ್ನಿಂದ ರಾಮನಗರಕ್ಕೆ

ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಪ್ರತಿದಿನ 6 ಬಸ್ 36 ಟ್ರಿಪ್ಗಳಲ್ಲಿ ಸಂಚರಿಸಲಿವೆ. ಎಂಆರ್ಬಿಎಸ್ ನಾಯಂಡಹಳ್ಳಿ ರಾಜರಾಜೇಶ್ವರಿನಗರ ಗೇಟ್ ಕೆಂಗೇರಿ ನೈಸ್ ರಸ್ತೆ ಜಂಕ್ಷನ್ ಮೂಲಕ ರಾಮನಗರ ತಲುಪುತ್ತವೆ.

ಬನಶಂಕರಿಯಿಂದ ಕನಕಪುರಕ್ಕೆ

ಬನಶಂಕರಿಯಿಂದ ಕನಕಪುರಕ್ಕೆ ಪ್ರತಿದಿನ 8 ಬಸ್ 48 ಟ್ರಿಪ್ಗಳಲ್ಲಿ ಸಂಚರಿಸುತ್ತವೆ. ಕೋಣನಕುಂಟೆ ಕ್ರಾಸ್ ತಲಗಟ್ಟಪುರ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣ ಕಗ್ಗಲಿಪುರ ಹಾರೋಹಳ್ಳಿ ದಯಾನಂದ ಸಾಗರ ಕಾಲೇಜು ಜೈನ್ ಯುನಿವರ್ಸಿಟಿ ಗೇಟ್ ಮೂಲಕ ಕನಕಪುರಕ್ಕೆ ಸಂಚರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.