ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್‌ ಮೀಸಲಾತಿ ಪಟ್ಟಿಗೆ ಬಿಎನ್‌ಪಿ ಆಕ್ಷೇಪ

Last Updated 18 ಸೆಪ್ಟೆಂಬರ್ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 198 ವಾರ್ಡ್‌ಗಳಿಗೆ ಘೋಷಿಸಲಾಗಿರುವ ಮೀಸಲಾತಿ ಪಟ್ಟಿಗೆ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಆಕ್ಷೇಪ ವ್ಯಕ್ತಪಡಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್, ‘ಈ ಮೀಸಲಾತಿ ಪಟ್ಟಿಯು ಪರಿಪೂರ್ಣವಾಗಿಲ್ಲ. ಕೆಲವು ವಾರ್ಡ್‌ಗಳಲ್ಲಿ ಎಷ್ಟೋ ವರ್ಷಗಳಿಂದ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಸಿಕ್ಕಿಲ್ಲ. ಈ ವಾರ್ಡ್‌ನಲ್ಲಿನ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಬಿಬಿಎಂಪಿ ಮೂಲಕ ಸೇವೆ ಸಲ್ಲಿಸಲು ಅವಕಾಶವೇ ಸಿಗದಂತಾಗಿದೆ’ ಎಂದು ಹೇಳಿದ್ದಾರೆ.

‘ಮೀಸಲಾತಿ ನಿಯಮವನ್ನು ಎಲ್ಲ ವಾರ್ಡ್‌ಗಳಲ್ಲಿ ಸರಿಯಾಗಿ ಪಾಲಿಸಲಾಗಿಲ್ಲ. ಅಂದರೆ, ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡುವಲ್ಲಿ ಈ ಪಟ್ಟಿ ವಿಫಲವಾಗಿದೆ’ ಎಂದು ಅವರು ದೂರಿದ್ದಾರೆ.

ಪಕ್ಷದ ನಾಯಕಿ ಬಿ.ವಿ. ಲಲಿತಾಂಬಾ, ‘ಕಳೆದ ಎರಡು ಚುನಾವಣೆಗಳಲ್ಲಿಯೂ (2010 ಮತ್ತು 2015) ಬಿಬಿಎಂಪಿಯ 16 ವಾರ್ಡ್‌ಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರಲಿಲ್ಲ. ಈ ಬಾರಿಯೂ ಇಲ್ಲಿ ಸಾಮಾನ್ಯ ವರ್ಗಕ್ಕೆ ಆದ್ಯತೆ ನೀಡಿಲ್ಲ. ಅಂದರೆ, ಈ ವಾರ್ಡ್‌ನಲ್ಲಿ ವಾಸಿಸುವ ಬಹುಸಂಖ್ಯಾತ ವರ್ಗಕ್ಕೆ ಅವಕಾಶವೇ ಸಿಗದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರದ 16 ವಾರ್ಡ್‌ಗಳು:

ಕೆಂಪೇಗೌಡ, ರಾಮಚಂದ್ರಾಪುರ, ಜಾಲಹಳ್ಳಿ, ವಿಶ್ವನಾಥ ನಾಗೇನಹಳ್ಳಿ, ಬೆನ್ನಿಗಾನಹಳ್ಳಿ, ವಿಜಿನಾಪುರ, ಸಿ.ವಿ. ರಾಮನ್‌ನಗರ, ಸರ್ವಜ್ಞ ನಗರ, ಹೂಡಿ, ಶಾಂತಲಾನಗರ, ಓಕಳಿಪುರ, ಕೆಂಪಾಪುರ ಅಗ್ರಹಾರ, ಧರ್ಮರಾಯಸ್ವಾಮಿ ದೇವಸ್ಥಾನ, ನೀಲಸಂದ್ರ, ಹೊಂಗಸಂದ್ರ ಹಾಗೂ ಬೇಗೂರು ವಾರ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT