ನಾಪತ್ತೆಯಾಗಿದ್ದ ಮಹಿಳೆ ಲಾಡ್ಜ್‌ನಲ್ಲಿ ಶವವಾಗಿ ಪತ್ತೆ

ಬೆಂಗಳೂರು: ನಾಪತ್ತೆಯಾಗಿದ್ದ ಮಹಿಳೆಯು ಕಲಾಸಿಪಾಳ್ಯದ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ನೆರೆಮನೆಯ ನಿವಾಸಿ ದಿಲೀಪ್ ಕುಮಾರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಲಾಲ್‍ಬಾಗ್ ಸಿದ್ದಾಪುರ ನಿವಾಸಿ ಕಮಲಾ (32) ಎಂದು ಗುರುತಿಸಲಾಗಿದೆ. ಓಬಳೇಶ್ ಎಂಬುವರ ಪತ್ನಿಯಾಗಿರುವ ಕಮಲಾ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರದಿಂದ ಪತ್ನಿ ಕಾಣೆಯಾಗಿರುವುದಾಗಿ ಓಬಳೇಶ್ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದರು.
ಅದೇ ದಿನ ದಿಲೀಪ್ ಕುಮಾರ್ ಎಂಬಾತನ ಜೊತೆಗೆ ಕಮಲಾ ಲಾಡ್ಜ್ ನಲ್ಲಿ ತಂಗಿದ್ದರು. ಲಾಡ್ಜ್‌ನ ಕೋಣೆಯಿಂದ ದುರ್ವಾಸನೆ ಬರುತ್ತಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ.
ಕಲಾಸಿಪಾಳ್ಯ ಪೊಲೀಸರು ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಧ್ಯಾಹ್ನ ದಿನೇಶ್ ಕೋಣೆಯಿಂದ ಹೊರಹೋಗಿದ್ದು, ಮತ್ತೆ ವಾಪಸ್ ಬಂದಿಲ್ಲ.
‘ಪತ್ನಿಯೊಂದಿಗೆ ದಿಲೀಪ್ ಎರಡು ವರ್ಷದಿಂದ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ದಿಲೀಪ್‍ನಿಂದ ದೂರ ಇರುವಂತೆ ಪತ್ನಿಗೆ ಎಚ್ಚರಿಸಿದ್ದೆ. ಆದರೂ, ಪ್ರತಿದಿನ ಸಂಜೆ ಅವರಿಬ್ಬರೂ ಭೇಟಿಯಾಗುತ್ತಿದ್ದರು’ ಎಂದು ಓಬಳೇಶ್ ತಿಳಿಸಿರುವುದಾಗಿ ಪೊಲೀಸರು ತಿಳಿಸಿದರು. ‘ದಿಲೀಪ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದೂ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.