ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ ಹೊಂದಿಕೊಂಡಿರುವ ಬಹುಮಹಡಿ ಕಟ್ಟಡದ ನೀರಿನ ಸಂಪಿನಲ್ಲಿ ಮೃತದೇಹ ಪತ್ತೆ

Last Updated 19 ಆಗಸ್ಟ್ 2022, 2:37 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧಕ್ಕೆ ಹೊಂದಿಕೊಂಡಿರುವ ಬಹು ಮಹಡಿ ಕಟ್ಟಡದ ನೀರಿನ ಸಂಪಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹಕೊಳೆತ ಸ್ಥಿತಿಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

‘ಮೃತ ವ್ಯಕ್ತಿಯ ಹೆಸರು ಗೊತ್ತಾಗಿಲ್ಲ. 30 ರಿಂದ 35 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ಮೃತ ದೇಹದ ಫೋಟೊಗಳನ್ನು ನಗರ ಹಾಗೂ ಹೊರ ಜಿಲ್ಲೆಗಳ ಠಾಣೆಗಳಿಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಬೆಂಕಿ ಅವಘಡಗಳು ಸಂಭವಿಸಿದಾಗ ತುರ್ತು ಬಳಕೆಗೆಂದು ನೀರಿನ ಸಂಪು ನಿರ್ಮಿಸಲಾಗಿದೆ. ಬಹುಮಹಡಿ ಕಟ್ಟಡ ಹಾಗೂ ವಿಕಾಸಸೌಧದ ನಡುವಿನ ಜಾಗದಲ್ಲಿ ಸಂಪು ಇದ್ದು, ಇದರ ಬಳಿ ಜನರ ಓಡಾಟ ಕಡಿಮೆ ಇರುತ್ತದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT