ಪ್ರತಿಭೆಗಳಿಗೆ ವೇದಿಕೆಯಾದ ಹ್ಯಾಕಥಾನ್‌

ಸೋಮವಾರ, ಜೂಲೈ 22, 2019
24 °C

ಪ್ರತಿಭೆಗಳಿಗೆ ವೇದಿಕೆಯಾದ ಹ್ಯಾಕಥಾನ್‌

Published:
Updated:
Prajavani

ಬೊಮ್ಮನಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ – 2019’ ಐದು ದಿನಗಳ ಹೊಸ ಯಂತ್ರಗಳ ಅನ್ವೇಷಣಾ ಕಾರ್ಯಾಗಾರ ಮತ್ತು ಸ್ಪರ್ಧೆ ಶನಿವಾರ ಮುಕ್ತಾಯವಾಯಿತು.

ಹೊಸೂರು ರಸ್ತೆಯ ಕೂಡ್ಲುಗೇಟ್ ಬಳಿ ಇರುವ ದಯಾನಂದ ಸಾಗರ ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರ ಹಾಗೂ ವಿವಿಧ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ‘ಹಾರ್ಡ್ ವೇರ್ ಸಂಚಿಕೆ’ ಕಾರ್ಯಾಗಾರ ಆಯೋಜಿಸಿತ್ತು.

ವಿವಿಧ ರಾಜ್ಯಗಳಲ್ಲಿನ ಕಾಲೇಜುಗಳನ್ನು ಪ್ರತಿನಿಧಿಸಿ 16 ತಂಡಗಳು ಭಾಗವಹಿಸಿದ್ದವು. ಕ್ಯಾಮೆರಾವನ್ನು ಬಳಸಿ ಹತ್ತಿ ಬಿಚ್ಚುವ ಯಂತ್ರ, ಮಿತ ನೀರಿನ ಬಳಕೆಯ ಏರ್ ಕೂಲರ್, ಟೆಲಿ ಪಿಕ್ಕಿಂಗ್ ರೋಬೋಟ್ ಇತ್ಯಾದಿ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !