ಬೊಮ್ಮನಹಳ್ಳಿ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ಕಾರ್ಯಕರ್ತರು ಬೊಮ್ಮನಹಳ್ಳಿಯಲ್ಲಿ ಶುಕ್ರವಾರ ಮೆರವಣಿಗೆ ನಡೆಸಿದರು.

ಹೊಸೂರು ರಸ್ತೆಯ ಗಾರೆಬಾವಿ ಪಾಳ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗುವ ಮೂಲಕ ಮೇ ದಿನವನ್ನು ಆಚರಿಸಿದರು.

ಬಹಿರಂಗ ಸಭೆಯಲ್ಲಿ ಸಿಐಟಿಯು ಬೊಮ್ಮನಹಳ್ಳಿ ವಲಯ ಅಧ್ಯಕ್ಷ ಧರ್ಮೇಗೌಡ ಮಾತನಾಡಿ ‘ಕೇಂದ್ರ ಸರ್ಕಾರ ಬಂಡವಾಳದಾರರ ಲಾಭಕ್ಕಾಗಿ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ನೂಕಲು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿದೆ, ಇತ್ತ ಕಾಂಗ್ರೆಸ್ ಸರ್ಕಾರವು ಈ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಆತುರ ಮಾಡುತ್ತಿದೆ, ಕಾರ್ಮಿಕ ವಿರೋಧಿ ಧೋರಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ದೂರಿದರು.

ಸಿಐಟಿಯು ಬೊಮ್ಮನಹಳ್ಳಿ ವಲಯ ಕಾರ್ಯದರ್ಶಿ ಜಾವಿದ್ ಅಹಮದ್ ಮಾತನಾಡಿ 'ಮೇ ದಿನಾಚರಣೆ ವಿಶ್ವದಕಾರ್ಮಿಕ ವರ್ಗಕ್ಕೆ ಸ್ಫೂರ್ತಿಯ ಸಂಕೇತವಾಗಿದೆ. ಎಂಟು ಗಂಟೆ ಕೆಲಸದ ಅವಧಿ, ಕಾರ್ಮಿಕರ ಹಕ್ಕುಗಳಿಗಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸುವ ದಿನವೂ ಕೂಡ ಇದಾಗಿದೆ. ರಾಜ್ಯ ಸರ್ಕಾರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಕೂಡಲೇ ಜಾರಿ ಮಾಡಬೇಕು, ಅಸಂಘಟಿತ ವಲಯದ ವಿವಿಧ ವಿಭಾಗದ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು' ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಮುಖಂಡ ಜಿ.ಮೂರ್ತಿ, ಆಟೊ ಚಾಲಕರ ಮುಖಂಡ ಮಾಣಿಕ್ಯರಾಜ್, ಸಿಐಟಿಯು ಹಿರಿಯ ಮುಖಂಡ ಕೃಪೇಂದ್ರ ಪಾಟೀಲ್, ಸನ್ ಸೆರಾ ಕಾರ್ಮಿಕ ಸಂಘದ ಮುಖಂಡ ರಾಮಕೃಷ್ಣ ರೆಡ್ಡಿ, ಸಿಪಿಎಂ ಮುಖಂಡ ಸಿ. ಜಗದೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-4-4127307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.