ಗುರುವಾರ , ನವೆಂಬರ್ 21, 2019
21 °C

ಪಾಲಿಶ್ ನೆಪ: ಮಾಂಗಲ್ಯ ಕಳವು

Published:
Updated:

ಬೆಂಗಳೂರು: ಆಭರಣ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಮನೆಯೊಂದಕ್ಕೆ ಬಂದಿದ್ದ ದುಷ್ಕರ್ಮಿಗಳು ಚಿನ್ನದ ಮಾಂಗಲ್ಯ ಸರ ಕದ್ದುಕೊಂಡು ಹೋಗಿದ್ದು, ಆ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಗಸ್ಟ್ 31ರಂದು ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು, 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕದ್ದುಕೊಂಡು ಹೋಗಿದ್ದಾರೆ’ ಎಂದು ಆರೋಪಿಸಿ ರಮ್ಯಾ ಎಂಬುವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಹೇಳಿದ್ದನ್ನು ನಂಬಿದ ರಮ್ಯಾ, ಮೊದಲಿಗೆ ಬೆಳ್ಳಿಯ ಕಾಲು ಚೈನ್ ಕೊಟ್ಟಿದ್ದರು. ಅದನ್ನು ಪಾಲಿಶ್ ಮಾಡಿ ಆರೋಪಿಗಳು ವಾಪಸು ಕೊಟ್ಟಿದ್ದರು. ಚಿನ್ನದ ಮಾಂಗಲ್ಯ ಸರವನ್ನೂ ಪಾಲಿಶ್ ಮಾಡುವುದಾಗಿ ಪಡೆದಿದ್ದರು. ನೀರು ಬಿಸಿ ಮಾಡಿ ಪಾತ್ರೆಯಲ್ಲಿ ಯಾವುದೋ ಪುಡಿ ಹಾಕಿದ್ದ ಆರೋಪಿಗಳು, ‘ಇದರಲ್ಲಿ ಮಾಂಗಲ್ಯ ಸರವಿದೆ. ನೀರು ತಣ್ಣಗಾದ ನಂತರ ತೆಗೆದುಕೊಳ್ಳಿ’ ಎಂದು ಹೇಳಿ ಹೋಗಿದ್ದರು. ಕೆಲ ನಿಮಿಷದ ಬಳಿಕ ನೀರು ತೆಗೆದು ನೋಡಿದಾಗ ಮಾಂಗಲ್ಯಸರ ಇರಲಿಲ್ಲ’ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)