ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಂದರಲ್ಲಿ ಕಸ: ಬಿಬಿಎಂಪಿಯಿಂದ ರಾತ್ರಿ ಕಾವಲು

Last Updated 13 ಜೂನ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲೆಂದರಲ್ಲಿ ಕಸ ಸುರಿದು ಹೋಗುವವರನ್ನು ಪತ್ತೆ ಹಚ್ಚಲು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಸಿಬ್ಬಂದಿ ರಾತ್ರಿ ಕಾವಲು ಆರಂಭಿಸಿದ್ದಾರೆ.

ಬೇಗೂರು ವಾರ್ಡಿನ ಮೈಕೋ ಲೇಔಟ್ ಬಳಿ ಕಾವಲು ಕಾಯುತ್ತಿದ್ದ ವೇಳೆ ಕಸ ಸುರಿಯಲು ಬಂದ ಇಬ್ಬರಿಗೆ ₹4,000 ದಂಡ ವಿಧಿಸಿ ಎಚ್ಚರಿಸಿದ್ದಾರೆ. 1 ತಿಂಗಳು ರಾತ್ರಿ ಕಾವಲು ಕಾಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಅಂಗಡಿಗಳನ್ನು ನಡೆಸುವ
ವರು ರಾತ್ರಿ ವೇಳೆ ಕಸ ಸುರಿಯುವುದು ಹೆಚ್ಚಾಗಿದೆ. ಅಂತಹವರಿಗೆ ದಂಡ ವಿಧಿಸಿದ್ದೇವೆ. ಎರಡನೇ ಬಾರಿ ಸಿಕ್ಕಿದರೆ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಬೇಗೂರು ವಾರ್ಡ್ ಆರೋಗ್ಯ ನಿರೀಕ್ಷಕ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT