ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತೃಭಾಷೆ ಉಳಿವಿಗೆ ಇಚ್ಛಾಶಕ್ತಿ ಅಗತ್ಯ: ಅನ್ನದ ಭಾಷೆ ಗೋಷ್ಠಿಯಲ್ಲಿ ಅಭಿಪ್ರಾಯ

Published 9 ಆಗಸ್ಟ್ 2024, 16:41 IST
Last Updated 9 ಆಗಸ್ಟ್ 2024, 16:41 IST
ಅಕ್ಷರ ಗಾತ್ರ

ಬೆಂಗಳೂರು:‌ ಅನ್ನ ಕೊಡುವ ಭಾಷೆಯಾಗಿ ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು, ಭಾಷೆ ಉಳಿವಿಗೆ ದೊಡ್ಡ ಜನಾಂದೋಲನವಾಗಬೇಕು, ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕು ...

ಬುಕ್‌ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಶುಕ್ರವಾರ ನಡೆದ ‘ಅಮ್ಮನ ಭಾಷೆಯಿಂದ ಅನ್ನದ ಭಾಷೆ’ – ಕುರಿತ ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು.

ಬೇರೆ ಭಾಷೆಗಳಿಗೆ ಹೋಲಿಸಿದರೆ 40 ವರ್ಷಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆ ತೀವ್ರ ಆತಂಕ ಹುಟ್ಟಿಸುವಂತಿದೆ. 1971 ರಿಂದ 2011ರ ಭಾಷಾ ಜನಗಣತಿ ಪ್ರಕಾರ ಹಿಂದಿ ಶೇ 66ರಷ್ಟಿದ್ದರೆ, ಕನ್ನಡ ಶೇ 3.73ರಷ್ಟು ಬೆಳವಣಿಗೆಯಾಗುತ್ತಿದೆ. ಭಾಷೆಯ ಉಳಿವಿಗೆ ಬಹುದೊಡ್ಡ ಜನಾಂದೋಲನವೇ ನಡೆಯಬೇಕಿದೆ‘ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. 

‘ರಾಜ್ಯ ಸರ್ಕಾರ ಇತ್ತೀಚೆಗೆ 1439 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸರ್ಕಾರ ಆರಂಭಿಸಿದ ಮೇಲೆ 850 ಕನ್ನಡ ಶಾಲೆಗಳು ಮುಚ್ಚಿದವು. ಹೀಗಾದಾಗ, ಕನ್ನಡ ಭಾಷೆ ಉಳಿಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ‘ಕನ್ನಡ ಮೊದಲಿನಿಂದಲೂ ಜ್ಞಾನದ ಭಾಷೆಯಾಗಿದೆ. ಉಳಿವಿನ ಸಮಸ್ಯೆ ಕನ್ನಡದ್ದಷ್ಟೇ ಅಲ್ಲ, ಜಗತ್ತಿನ ಎಲ್ಲ ಭಾಷೆಗಳ ಸಮಸ್ಯೆ. ಆದರೆ, ಕನ್ನಡ ಭಾಷೆಗೆ ಸಾವಿಲ್ಲ, ಅದು ಬೆಳೆಯುತ್ತದೆ‘ ಎಂದು ಕವಿ ಪ್ರತಿಪಾದಿಸಿದರು.

ಲೇಖಕಿ ಸಬಿಹಾ ಭೂಮಿಗೌಡ ಹಾಗೂ ಲೇಖಕ ವಿಕ್ರಮ್ ವಿಸಾಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT