ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗೇ ಅಸ್ತಿ ಸರ್ವಮಪಿ’ ಬಿಡುಗಡೆ

Last Updated 27 ಸೆಪ್ಟೆಂಬರ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗೆರೆ ಕೃಷ್ಣಶಾಸ್ತ್ರಿಯವರು ರಚಿಸಿರುವ ‘ಯೇಗ್ದಾಗೆಲ್ಲ ಐತೆ’ ಕನ್ನಡ ಕೃತಿಯ ಸಂಸ್ಕೃತ ಅನುವಾದದ ‘ಯೋಗೇ ಅಸ್ತಿ ಸರ್ವಮಪಿ’ ಕೃತಿ ಮಂಗಳವಾರ (ಸೆ.29) ಬಿಡುಗಡೆಯಾಗಲಿದೆ.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಹೆಗಡೆ ಅನುವಾದ ಮಾಡಿದ್ದಾರೆ. ಗಿರಿನಗರದ ಅಕ್ಷರಂನಲ್ಲಿ ಅಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಪಾಲ್ಗೊಳ್ಳಲಿದ್ದಾರೆ.

‘ಯೇಗ್ದಾಗೆಲ್ಲ ಐತೆ’ ಕನ್ನಡ ಆಧ್ಯಾತ್ಮಿಕ ಪ್ರಪಂಚದಲ್ಲಿನ ಪ್ರಸಿದ್ಧ ಪುಸ್ತಕ. ಮುಕುಂದೂರು ಸ್ವಾಮಿಗಳೆಂಬ ಜೀವನ್ಮುಕ್ತರ ಸರಳ ಜೀವನ-ಬೋಧನೆಗಳನ್ನು ಅಷ್ಟೇ ಸರಳ-ಸುಂದರವಾದ ಗ್ರಾಮೀಣ ಭಾಷೆಯಲ್ಲಿ ಉಣಬಡಿಸುತ್ತದೆ. ಅನುವಾದಿತ ಪುಸ್ತಕಸರಳ ಸಂಸ್ಕೃತದಲ್ಲಿದ್ದು, ಶಿಥಿಲಗೊಳ್ಳುತ್ತಿರುವ ಕನ್ನಡ-ಸಂಸ್ಕೃತಗಳ ಸೇತುವೆಯನ್ನು ಬಲಪಡಿಸಲಿದೆ’ ಎಂದು ಸಂಸ್ಕೃತ ಭಾರತಿ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT