ಶುಕ್ರವಾರ, ಮೇ 14, 2021
25 °C

ಅಂತಃಸ್ಫೋಟ ಕೃತಿಯಲ್ಲಿ ಬೆಂಗಳೂರಿನ ಬೆಳವಣಿಗೆಯಿಂದಾದ ಸಮಸ್ಯೆಗಳ ಚರ್ಚೆ‌: ಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೇಖಕಿ ಸರಸ್ವತಿ ಶಂಕರ್ ಅವರ ವೈಚಾರಿಕ ಕಾದಂಬರಿ 'ಅಂತಃಸ್ಫೋಟ' ಬಿಡುಗಡೆ ಮಾಡಿದ ಖ್ಯಾತ ಸಾಹಿತಿ ಮತ್ತು ಸಂಶೋಧಕರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು, ಬೆಂಗಳೂರಿನ ಕ್ಷಿಪ್ರ ಬೆಳವಣಿಗೆಯಿಂದಾಗಿ ಉದ್ಭವಿಸಿದ ವಿವಿಧ ಸಮಸ್ಯೆಗಳನ್ನು ಈ ಕೃತಿಯಲ್ಲಿ ಕಲಾತ್ಮಕವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ನಗರದ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸಭಾಂಗಣದಲ್ಲಿ ಭಾನುವಾರ ನಡೆದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕರ್ನಾಟಕ ಸಾಂಸ್ಕೃತಿಕ ಕಲಾಪ್ರತಿಷ್ಠಾನದ ಅಧ್ಯಕ್ಷ ಎಸ್.‌ಎನ್. ಪಂಜಾಜೆಯವರು ಸರಸ್ವತಿ ಶಂಕರ್ ಅವರ 'ಹದಿನಾರು ಹನಿ' ಕಥಾಸಂಕಲನದ ಪರಿಚಯ ಮಾಡಿಕೊಟ್ಟರು. ಕವಿ ಮತ್ತು ಸಂಸ್ಕೃತಿ ಚಿಂತಕರಾದ ಭ.ರಾ.ವಿಜಯ ಕುಮಾರ್ ಅವರು ಎಸ್ ರಾಮಚಂದ್ರಪ್ಪ ಅವರ 'ಉದ್ಯೋಗ ಪರ್ವ' ಎಂಬ ಅನುಭವ ಕಥನವನ್ನು ಪರಿಚಯಿಸಿದರು.

ಲೇಖಕರು ತಮ್ಮ ಕೃತಿಗಳ ಕುರಿತು ಮಾತನಾಡಿದರು. ಪ್ರಕಾಶಕ ಎಸ್‌.ಆರ್‌. ಸತ್ಯ ನಾರಾಯಣ ಅವರು ಸ್ವಾಗತಿಸಿದರು. ಶ್ರೀಮತಿ ಪುನೀತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು