ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃತಿಗಳ 500 ಪ್ರತಿ ಖರೀದಿಸಲಿ’

ಸರ್ಕಾರಕ್ಕೆ ಸಾಹಿತಿ ದೊಡ್ಡರಂಗೇಗೌಡ ಒತ್ತಾಯ
Last Updated 13 ಅಕ್ಟೋಬರ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರವು ಪ್ರತಿ ಕೃತಿಯ 500 ಪ್ರತಿಗಳನ್ನು ಖರೀದಿಸುವ ಮೂಲಕಸಂಕಷ್ಟದಲ್ಲಿರುವ ಪುಸ್ತಕೋದ್ಯಮಕ್ಕೆ ನೆರವಾಗಬೇಕು’ ಎಂದು ಸಾಹಿತಿ ದೊಡ್ಡರಂಗೇಗೌಡ ಒತ್ತಾಯಿಸಿದರು.

ಸುಂದರ ಪ್ರಕಾಶನ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆ.ಟಿ. ಗಟ್ಟಿ ಅವರ ‘ನಿನ್ನೆ–ಇಂದು ನಾಳೆ’, ಎಸ್‌.ವಿ. ಪ್ರಭಾವತಿ ಅವರ ‘ಗಾರ್ಗಿ’, ಸಿ.ಎಸ್. ಊರ್ಮಿಳಾ ಅವರ ‘ಅಮೆರಿಕದತ್ತ ಪಯಣ’, ಸುಬ್ರಹ್ಮಣ್ಯ ಗಲಗಲಿ ಅವರ ‘ಅಮೃತ ಪುತ್ರ’ ಹಾಗೂ ‘ಕನ್ನಡ ಕವಿಕಾವ್ಯ ಕುಸುಮ’ದ ಮೂರು ಸಂಪುಟ ಬಿಡುಗಡೆ ಮಾಡಿ, ಮಾತನಾಡಿದರು.

‘ಬದಲಾದ ಸನ್ನಿವೇಶದಲ್ಲಿ ಪುಸ್ತಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಬಹುತೇಕ ಪ್ರಕಾಶಕರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಸರ್ಕಾರ ಪ್ರತಿ ಕೃತಿಯ 300 ಪುಸ್ತಕಗಳನ್ನು ಖರೀದಿಸಿ, ವಾಚನಾಲಯಕ್ಕೆ ನೀಡುವುದಾಗಿ ಹೇಳಿತ್ತು. ಆದರೆ, ಈವರೆಗೂ ಪುಸ್ತಕ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಪುಸ್ತಕಗಳನ್ನು ಖರೀದಿಸಿ ಶಾಲೆ–ಕಾಲೇಜು ಹಾಗೂ ವಾಚನಾಲಯಕ್ಕೆ ನೀಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT