ಕೋಮುವಾದವು ಕೋವಿಡ್‌ಗಿಂತ ಅಪಾಯಕಾರಿ: ಎಸ್.ಜಿ. ಸಿದ್ದರಾಮಯ್ಯ

ಬೆಂಗಳೂರು: ‘ಕೋಮುವಾದವು ಕೊರೊನಾಗಿಂತಲೂ ಅಪಾಯಕಾರಿ ಯಾದ ವೈರಾಣು’ ಎಂದು ಸಾಹಿತಿ ಪ್ರೊ.ಎಸ್. ಜಿ. ಸಿದ್ದರಾಮಯ್ಯ ಅಭಿಮತ ವ್ಯಕ್ತಪಡಿಸಿದರು.
‘ಅವಧಿ’ಯು ಆನ್‌ಲೈನ್‌ನಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ‘ಬಿಜ್ಜಳ ನ್ಯಾಯ’ ಹಾಗೂ ‘ದಕ್ಕದ ದಾರಿಯಲ್ಲಿ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು.
‘ಶತಮಾನಗಳಿಂದ ದೇಶಕ್ಕೆ ಅಂಟಿ ಕೊಂಡು ಬಂದಿರುವ ಕೋಮುವಾದವೇ ಅತ್ಯಂತ ವಿಷಕಾರಿ ಯಾದ ರೋಗ. ಅದನ್ನು ದಾಟುವುದೇ ಇಂದಿನ ಮುಖ್ಯ ಸವಾಲು. ಅದರಿಂದ ಮುಕ್ತವಾಗದ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ. ಯಾರು ಈ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೋ, ಅವರೇ ಈ ಕೋಮುವಾದದ ಮುನ್ನಡೆಗೆ ಕಾಲಾಳು ಗಳಾಗಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ’ ಎಂದು ತಿಳಿಸಿದರು.
ವಿಮರ್ಶಕ ರಾಮಲಿಂಗಪ್ಪ ಟಿ. ಬೇಗೂರು, ‘ಎಸ್.ಜಿ. ಸಿದ್ಧರಾಮಯ್ಯ ಅವರ ಜನಪರ, ಜೀವಪರ ದೃಷ್ಟಿ ಕೋನವು ಬರವಣಿಗೆಯ ಮುಖ್ಯ ಕೇಂದ್ರವಾಗಿದೆ. ಓದುಗನೂ ಕವಿತೆ ಯನ್ನು ಅನುಭವಿಸುವಂತೆ ಅವರು ಬರೆಯುತ್ತಾರೆ. ಅಪರಿಮಿತದ ಹಂಬಲ ಮತ್ತು ಓದುಗನಿಗೆ ಅರ್ಥದ ತೊಡಕಾಗಬಾರದು ಎನ್ನುವ ಕಾಳಜಿ ಅವರಿಗಿದೆ’ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.