ಶನಿವಾರ, ಸೆಪ್ಟೆಂಬರ್ 25, 2021
22 °C

ಗಂಭೀರವಾಗಿದ್ದು ನಗಿಸುವ ಡುಂಡಿರಾಜ್: ಕವಿ ಬಿ.ಆರ್. ಲಕ್ಷ್ಮಣ ರಾವ್ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹಾಸ್ಯಗಾರರು ತಾವು ಗಂಭೀರವಾಗಿದ್ದು, ನೋಡುಗರನ್ನು ನಗಿಸುತ್ತಾರೆ. ಅದೇ ರೀತಿ, ಗಂಭೀರವಾಗಿ ಕಾಣಿಸುವ ಡುಂಡಿರಾಜ್, ಬರವಣಿಗೆಯ ಮೂಲಕ ಓದುಗರನ್ನು ರಂಜಿಸುತ್ತಾರೆ’ ಎಂದು ಕವಿ ಬಿ.ಆರ್. ಲಕ್ಷ್ಮಣ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನವು ಬುಕ್‌ ಬ್ರಹ್ಮದ ಸಹಯೋಗದಲ್ಲಿ ಆನ್‌ಲೈನ್ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಚ್. ಡುಂಡಿರಾಜ್ ಅವರ ‘ಅಂ–ಕಿತಾಬ್ ಜಿಂದಾಬಾದ್’ ಕೃತಿ, ಕೇಶವರೆಡ್ಡಿ ಹಂದ್ರಾಳ ಅವರ ‘ಅಣು’ ಕಾದಂಬರಿ ಹಾಗೂ ಎಸ್.ಪಿ. ಪದ್ಮಪ್ರಸಾದ್ ಅವರ ‘ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಪ್ರವಾಸ ಕಥನವನ್ನು ಬಿಡುಗಡೆ ಮಾಡಿದರು.

‘ಡುಂಡಿರಾಜ್ ಅವರು ಕನ್ನಡ ಭಾಷೆಯನ್ನು ಮುರಿದು, ಮತ್ತೆ ಕಟ್ಟುವ ಕ್ರಿಯೆಯೊಂದಿಗೆ ಓದುಗರು ಸಾಹಿತ್ಯಾನಂದವನ್ನು ಅನುಭವಿಸುವಂತೆ ಮಾಡುತ್ತಾರೆ. ವಿಷಯ ಪುನರಾವರ್ತನೆಯಾಗದಂತೆಯೂ ಎಚ್ಚರ ವಹಿಸುತ್ತಾರೆ. ನವಿರಾದ ಹಾಸ್ಯದ ಮೂಲಕ ವಿಚಾರಗಳ ಪ್ರಸ್ತುತಿ, ವೈವಿಧ್ಯತೆ ಇರುತ್ತದೆ’ ಎಂದರು.

ವಿಮರ್ಶಕ ಡಾ. ಎಚ್. ದಂಡಪ್ಪ ಮಾತನಾಡಿ ‘ಕೇಶವರೆಡ್ಡಿ ಹಂದ್ರಾಳ ಅವರ ‘ಅಣು’ ಕಾದಂಬರಿಯು ಬಡತನ, ಹಸಿವು, ಲೈಂಗಿಕತೆಯ ಶೋಷಣೆ ಸೇರಿದಂತೆ ವಿವಿಧ ವಸ್ತುಗಳನ್ನು ಅನಾವರಣ ಮಾಡುತ್ತವೆ. ಪ್ರೇಮ-ಕಾಮದ ಕುರಿತ ತಾತ್ವಿಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ‘ಆಂಗ್ಲರ ನಾಡಿನಲ್ಲಿ ಅಲೆಮಾರಿ’ ಕೃತಿಯು ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

ಲೇಖಕರಾದ ಎಚ್. ಡುಂಡಿರಾಜ್, ಕೇಶವರೆಡ್ಡಿ ಹಂದ್ರಾಳ ಹಾಗೂ ಎಸ್.ಪಿ. ಪದ್ಮಪ್ರಸಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.