ಬುಧವಾರ, ನವೆಂಬರ್ 20, 2019
27 °C

ರಾಜಕಾಲುವೆ: ಬಾಲಕನ ಮೃತದೇಹ ಪತ್ತೆ

Published:
Updated:

ಬೆಂಗಳೂರು: ರಾಜಕಾಲುವೆಗೆ ಇತ್ತೀಚೆಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಗೋರಿಪಾಳ್ಯ ಬಳಿಯ ಅರಾಫತ್ ನಗರದ ಐದು ವರ್ಷದ ಬಾಲಕ ಝೈನ್ ಶರೀಫ್ ಎಂಬಾತನ ಮೃತದೇಹ ರಾಜರಾಜೇಶ್ವರಿನಗರದ ಗ್ಲೋಬಲ್‌ ವಿಲೇಜ್‌ ಬಳಿ ಬುಧವಾರ ಪತ್ತೆಯಾಗಿದೆ.

ಇಮ್ರಾನ್ ಶರೀಫ್ ಹಾಗೂ ಗುಲ್ಶನ್ ದಂಪತಿಯ ಮಗ ಝೈನ್, ಆಗಸ್ಟ್ 30ರಂದು ಬೆಳಿಗ್ಗೆ ಸ್ಥಳೀಯ ಬಾಲಕಿಯೊಬ್ಬಳ ಜೊತೆ ಕಸ ಎಸೆ
ಯಲು ಕಾಲುವೆ ಬಳಿ ಹೋಗಿದ್ದಾಗ ಆಕಸ್ಮಿಕ‌ವಾಗಿ ಬಿದ್ದು ಕೊಚ್ಚಿ ಹೋಗಿದ್ದ. ಬಾಲಕಿ ಹೆದರಿ ಯಾರಿಗೂ ಹೇಳಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಬಾಲಕಸಿಗದ ಕಾರಣ ಝೈನ್‌ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ‌ ರಾಜಕಾಲುವೆಗೆ ಬಿದ್ದು ಬಾಲಕ ಕೊಚ್ಚಿ ಹೋಗಿರುವುದು ಖಚಿತವಾಗಿತ್ತು.

ಪ್ರತಿಕ್ರಿಯಿಸಿ (+)