ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಂಡ್ ಬೆಂಗಳೂರು-ದಾರಿ ಹತ್ತಾರು: ಓದುಗರ ಪ್ರತಿಕ್ರಿಯೆ

Last Updated 31 ಆಗಸ್ಟ್ 2020, 19:44 IST
ಅಕ್ಷರ ಗಾತ್ರ
ADVERTISEMENT
""
""
""
""

ಬೆಂಗಳೂರು: ’ಬ್ರ್ಯಾಂಡ್‌ ಬೆಂಗಳೂರು– ದಾರಿ ಹತ್ತಾರು‘ ಮಾಲಿಕೆಯಲ್ಲಿ ’ರಾಜಧಾನಿಯಲ್ಲೂ ‍ಪ್ರಾದೇಶಿಕ ಅಸಮಾನತೆ‘ ಕುರಿತು’ಪ್ರಜಾವಾಣಿ‘ ಸೋಮವಾರ ವರದಿ ಪ್ರಕಟಿಸಿತ್ತು. ನಗರದಲ್ಲಿನ ಅಭಿವೃದ್ಧಿ ಅಸಮಾನತೆ ಹಾಗೂ ನಗರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಓದುಗರಿಂದ ಸಲಹೆಗಳನ್ನು 'ಪ್ರಜಾವಾಣಿ' ಆಹ್ವಾನಿಸಿತ್ತು. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಪತ್ತಂಗಿ ಮುರಳಿ

'ತೆರಿಗೆ ಸಂಗ್ರಹಿಸಿ, ಸೌಲಭ್ಯದಲ್ಲಿ ತಾರತಮ್ಯ'

ನಗರದಲ್ಲಿ ಅಭಿವೃದ್ದಿ ಅಸಮಾನತೆ ಅವ್ಯಾಹತವಾಗಿದೆ. ಕೆಲವು ಬಡಾವಣೆಗಳ ರಸ್ತೆಗಳು ಅತ್ಯಾಧುನಿಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೆ, ಮತ್ತೊಂದೆಡೆ ಟ್ಯೂಬ್ ಲೈಟ್ ಬೆಳಕೂ ಕಾಣದ ರಸ್ತೆಗಳಿವೆ. ಜನರಿಂದ ಸಮಾನವಾಗಿ ತೆರಿಗೆ ಸಂಗ್ರಹಿಸುವ ಪಾಲಿಕೆಯು ಸಮಾನ ಸೌಲಭ್ಯ ನೀಡಲು ತಾರತಮ್ಯ ಮಾಡುತ್ತಿದೆಯೋ ಉತ್ತರಿಸಬೇಕು.

-ಪತ್ತಂಗಿ ಮುರಳಿ, ಕುಮಾರಸ್ವಾಮಿ ಬಡಾವಣೆ

ರಮ್ಯಾ


ಅಭ್ಯರ್ಥಿಯಂತೆ ಅಭಿವೃದ್ಧಿ

ಅಭಿವೃದ್ಧಿ ಅಸಮಾನತೆಗೆ ರಾಜಕಾರಣಿಗಳಷ್ಟೇ ನಾಗರಿಕರೂ ಹೊಣೆಗಾರರು. ಚುನಾವಣೆಗಳಲ್ಲಿ ಶೇ 50ರಷ್ಟು ಮಂದಿ ಮಾತ್ರ ಮತ ಚಲಾಯಿಸುತ್ತಿದ್ದಾರೆ. ಇದು ಸರಿಯಲ್ಲ. ಪ್ರಜ್ಞಾವಂತ ಮತದಾರರು ಮತ ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಪ್ರತಿನಿಧಿಯ ಪ್ರಾಮಾಣಿಕತೆಯೇ ಕ್ಷೇತ್ರದ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ.

ರಮ್ಯಾ, ರಾಜರಾಜೇಶ್ವರಿ ನಗರ

ರೇವಣ್ಣ

ಅನುದಾನದ ಸಮಾನ ಹಂಚಿಕೆಯಾಗಲಿ

ಪಾಲಿಕೆಯು ಎಲ್ಲ ವಾರ್ಡ್‍ಗಳಿಗೆ ಅನುದಾನವನ್ನು ಸಮಾನವಾಗಿ ಹಂಚಬೇಕು. ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚಿತ್ರಸಹಿತ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡುವ ಜವಾಬ್ದಾರಿಯನ್ನು ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರೂ ಹೊರಬೇಕು.

ರೇವಣ್ಣ, ಬೆಂಗಳೂರು

ಶಾಂತಿ

ಇನ್ನೂ ಇದೆ ಸಾರಿಗೆ ಸಮಸ್ಯೆ

ಬೃಹತ್ ಬೆಂಗಳೂರಿನಲ್ಲಿ ಬಸ್ ಹಾಗೂ ಆಟೊಗಳು ಸಂಚರಿಸಲಾಗದ ಅದೆಷ್ಟೋ ರಸ್ತೆಗಳು ಈಗಲೂ ಇವೆ. ಇಂತಹ ಸ್ಥಳಗಳಲ್ಲಿ ತುರ್ತು ಸೇವೆಗಳನ್ನು ಪಡೆಯಲು ಸಾರ್ವಜನಿಕರು ಪರದಾಡಬೇಕು. ಇಂತಹ ಸಮಸ್ಯೆಗಳನ್ನು ವಾರ್ಡ್ ಮಟ್ಟದಲ್ಲಿ ನಿವಾರಿಸಬೇಕು. ನಗರದಾದ್ಯಂತ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಬರಲಿ.

ಶಾಂತಿ, ಮೈಕೊ ಬಡಾವಣೆ

ಸಂಪತ್

ಪೂರ್ಣ ಅನುದಾನ ಬಳಕೆಯಾಗಲಿ

ಆಡಳಿತ ಪಕ್ಷದ ವಾರ್ಡ್‍ಗಳಿಗೆ ಬೆಣ್ಣೆ ಹಾಗೂ ವಿರೋಧ ಪಕ್ಷಗಳ ವಾರ್ಡ್‍ಗಳಿಗೆ ಸುಣ್ಣದಂತೆ ತಾರತಮ್ಯ ಮಾಡಲಾಗುತ್ತಿದೆ. ವಾರ್ಡ್‍ಗಾಗಿ ಮೀಸಲಾಗಿರುವ ಹಣವನ್ನು ಪೂರ್ಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಇದರಿಂದಲೇ ಆಗುವುದು ಸಮಪಾಲು-ಸಮಬಾಳು.

ಸಂಪತ್, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT