ಲಂಚ ಆರೋಪದಡಿ ಇನ್‌ಸ್ಟೆಕ್ಟರ್, ಕಾನ್‌ಸ್ಟೆಬಲ್‌ ಬಂಧನ: 14 ದಿನ ನ್ಯಾಯಾಂಗ ವಶ

7

ಲಂಚ ಆರೋಪದಡಿ ಇನ್‌ಸ್ಟೆಕ್ಟರ್, ಕಾನ್‌ಸ್ಟೆಬಲ್‌ ಬಂಧನ: 14 ದಿನ ನ್ಯಾಯಾಂಗ ವಶ

Published:
Updated:

ಬೆಂಗಳೂರು: ಸುಳ್ಳು ಪ್ರಕರಣ ದಾಖಲಿಸುವುದಾಗಿ ಹೇಳಿ ಸ್ನೂಕರ್‌ ಕ್ಲಬ್ ಮಾಲೀಕರಿಂದ ₹30 ಸಾವಿರ ವಸೂಲಿ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್‌ ಮುನಿಕಷ್ಣ ಹಾಗೂ ಕಾನ್‌ಸ್ಟೆಬಲ್ ಉಮೇಶರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಭಾನುವಾರ ನಸುಕಿನಲ್ಲಿ ಅವರಿಬ್ಬರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ‌.

ಸ್ನೂಕರ್ ಕ್ಲಬ್ ಮಾಲೀಕ್ ಸೈಯದ್ ಇಸ್ಮಾಯಿಲ್ ಎಂಬುವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಇನ್‌ಸ್ಟೆಕ್ಟರ್‌, ಹಣ ಪಡೆಯುವಾಗಲೇ ಎಸಿಬಿಗೆ ಬಲೆಗೆ ಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !