ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಿತ ಅಂಕಪಟ್ಟಿಗೂ ಲಂಚ!

ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳ ಆರೋಪ
Last Updated 17 ಜನವರಿ 2020, 6:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆಅಂಕಪಟ್ಟಿ ನೀಡಿಕೆಯಲ್ಲಿ ವಿಳಂಬ ಮಾಡಲಾಗುತ್ತಿದ್ದು, ಉಚಿತವಾಗಿ ಮುದ್ರಿತ ಅಂಕಪಟ್ಟಿಯನ್ನು ನೀಡಲು ಬಯಸದ ಕೆಲವೊಂದು ಶಕ್ತಿಗಳಿಂದಲೇ ಈ ಅವ್ಯವಸ್ಥೆ ನಿರ್ಮಾಣವಾಗಿರುವ ಕುರಿತು ಶಂಕೆ ಇದೆ.

ಈಚೆಗೆ ನಗರದಲ್ಲಿ ನಡೆದ ವಿದ್ಯಾರ್ಥಿ ಮಾರ್ಗದರ್ಶಿ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ಬೆಂಗಳೂರು ವಿಶ್ವವಿದ್ಯಾಲಯ ತನಗೆ ಇನ್ನೂ ಅಂಕಪಟ್ಟಿ ನೀಡಿಲ್ಲ ಎಂದು ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರಿಗೆ ತಿಳಿಸಿದ್ದ. ಇದರಿಂದ ಕುಲಪತಿ ಅವರು ಒಂದು ಗಳಿಗೆ ವಿಚಲಿತಗೊಂಡಿದ್ದರು. ಇನ್ನಷ್ಟು ವಿಳಂಬ ಆಗದಂತೆ ನೋಡಿಕೊಳ್ಳುವುದಾಗಿ ಅವರು ಆಗ ಹೇಳಿದ್ದರು.

‘ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಮುದ್ರಿತ ಅಂಕಪಟ್ಟಿಯನ್ನು ನೀಡಲೇಬೇಕು ಎಂಬ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಶೈಕ್ಷಣಿಕ ಮಂಡಳಿ ಸಭೆಯಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಇದರ ಹೊರತಾಗಿ ಅಗತ್ಯ ಇದ್ದಾಗಲೆಲ್ಲಾ ಅಂಕಪಟ್ಟಿ ಬೇಕಿದ್ದರೆ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿ
ಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಪ್ರೊ. ವೇಣುಗೋಪಾಲ್‌ ಅವರು ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದು ವಿಶ್ವವಿದ್ಯಾಲಯದ ಕರ್ತವ್ಯ. ಅದಕ್ಕೆ ಯಾರೂ ದುಡ್ಡು ಕೊಡಬಾರದು, ವಿದ್ಯಾರ್ಥಿಗಳಿಂದ ದುಡ್ಡನ್ನು ಕೇಳಲೂಬಾರದು. ಕೆಲವೊಂದು ವ್ಯಕ್ತಿಗಳು ದುಡ್ಡು ಮಾಡುವ ಸಲುವಾಗಿಯೇ ಮುದ್ರಿತ ಅಂಕಪಟ್ಟಿ ನೀಡದೆ ಇರುವ ಸಾಧ್ಯತೆ ಇದೆ, ಇದಕ್ಕೆ ಅವಕಾಶ ಕೊಡುವುದಿಲ್ಲ, ಯಾರಿಗೆ ಮುದ್ರಿತ ಅಂಕಪಟ್ಟಿ ಸಿಕ್ಕಿಲ್ಲವೋ ಅವರು ನನ್ನನ್ನು ಸಂಪರ್ಕಿಸಿದರೆ ಉಚಿತವಾಗಿ ಅಂಕಪಟ್ಟಿ ಕೊಡಿಸಲಾಗುತ್ತದೆ, ವಿಶ್ವವಿದ್ಯಾಲಯದಲ್ಲಿ ಈ ರೀತಿಯಲ್ಲೂ ಹಣ ಮಾಡಲು ಹೊರಟಿರುವ ವ್ಯಕ್ತಿಗಳ ಕುರಿತು ಸಂಶಯ ಇತ್ತು, ವಿದ್ಯಾರ್ಥಿಗಳ ಅಳಲು ಕೇಳಿದಾಗ ಇದು ದೃಢವಾದಂತಿದೆ’ ಎಂದರು.

ಹಣ ಹೊಡೆಯುವ ದಂಧೆ

ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿಯಲ್ಲಿ (ಎನ್‌ಎಡಿ) ನೋಂದಾಯಿಸಿಕೊಳ್ಳದೆ ಇದ್ದರೆ ಅಂಕಪಟ್ಟಿ ಸಿಗುವುದಿಲ್ಲ ಎಂಬ ವ್ಯವಸ್ಥಿತ ಪ್ರಚಾರವನ್ನು ವಿಶ್ವವಿದ್ಯಾಲಯದಲ್ಲಿ ಮಾಡಲಾಗುತ್ತಿದ್ದು, ಇನ್ನು ಮುಂದೆ ಮುದ್ರಿತ ಅಂಕಪಟ್ಟಿ ಕೊಡುವುದಿಲ್ಲ ಎಂಬುದನ್ನೂ ಬಿಂಬಿಸಲಾಗುತ್ತಿದೆ. ಉಚಿತವಾಗಿ ಮುದ್ರಿತ ಅಂಕಪಟ್ಟಿ ನೀಡಬೇಕು ಎಂಬ ನಿಯಮ
ವನ್ನು ಜಾಣತನದಿಂದ ಮುಚ್ಚಿಡಲಾಗಿದೆ. ವಿದ್ಯಾರ್ಥಿಗಳು ಇದನ್ನೇ ನಂಬಿಕೊಂಡಿದ್ದಾರೆ. ಹಣ ಹೊಡೆಯುವ ದಂಧೆ ಇದು ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT