ಜೇಮ್ಸ್, ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಆನ್‌ಲೈನ್ ಮೂಲಕ ಕೋರಮಂಗಲದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಜುಲೈ 27ರಂದು ಮನೆ ಮಾಲೀಕರಿಗೆ ಕರೆ ಮಾಡಿ, ‘ಆಗಸ್ಟ್ 1ರ ವರೆಗೆ ತೊಂದರೆ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಅವರನ್ನು ಮಾತನಾಡಿಸಿರಲಿಲ್ಲ. ಶನಿವಾರ ಮನೆ ಮಾಲೀಕರು ಜೇಮ್ಸ್‌ಗೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಿರಲಿಲ್ಲ. ಮನೆ ಬಳಿ ಬಂದಾಗ ದುರ್ವಾಸನೆ ಬಂದಿದೆ. ಆತಂಕಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮನೆ ಒಳ ಪ್ರವೇಶಿಸಿದಾಗ ಕೊಠಡಿಯ ಹಾಸಿಗೆ ಮೇಲೆ ಜೇಮ್ಸ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.