ಭಾನುವಾರ, ಅಕ್ಟೋಬರ್ 20, 2019
24 °C
ಒಂದು ದಿನದ ಮಟ್ಟಿಗೆ ಅಧಿಕಾರ ಪಡೆದ ಅಂಬಾಲಿಕಾ ಬ್ಯಾನರ್ಜಿ

ನಗರದ ಯುವತಿ ಬ್ರಿಟನ್ ಡೆಪ್ಯುಟಿ ಹೈ ಕಮಿಷನರ್!

Published:
Updated:
Prajavani

ಬೆಂಗಳೂರು: ಒಂದು ದಿನದ ಮಟ್ಟಿಗೆ ನಗರದ ಯುವತಿ ಅಂಬಾಲಿಕಾ ಬ್ಯಾನರ್ಜಿ ಬ್ರಿಟನ್‌ ಡೆಪ್ಯುಟಿ ಹೈ ಕಮಿ ಷನರ್ ಹುದ್ದೆಯನ್ನು ಅಲಂಕರಿಸಿದರು.

ಬ್ರಿಟನ್‌ ಡೆಪ್ಯುಟಿ ಹೈಕಮಿಷನರ್ ಆಗಿ ಶುಕ್ರವಾರ ಅಧಿಕಾರ ಸ್ವೀಕರಿಸುವ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸಿದ ಗೌರವಕ್ಕೆ ಭಾಜನರಾದರು. ಈ ಹುದ್ದೆಯಿಂದ ಕೆಳಗಿಳಿದಿದ್ದ ಜೆರೆಮಿ ಪಿಲ್ಮೋರ್- ಬೆಡ್ಫೋರ್ಡ್ ಅವರು ಪುನಃ ಅಧಿಕಾರ ಸ್ವೀಕರಿಸಿದರು.

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ದಿನದ ಮಟ್ಟಿಗೆ ಬ್ರಿಟನ್‌ ಡೆಪ್ಯುಟಿ ಹೈಕಮಿಷನರ್ ಆಗುವ ಅವಕಾಶ ಕಲ್ಪಿಸಲಾಗಿತ್ತು. ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ದೈನಂದಿನ ಜೀವನ ಹೇಗಿರುತ್ತದೆ ಎಂದು ತಿಳಿಸಿಕೊಡುವುದು ಈ ಸ್ಪರ್ಧೆ ಉದ್ದೇಶ. ಅಂಬಾಲಿಕಾ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಅಧಿಕಾರ ಸ್ವೀಕರಿ ಸಿದ ಅಂಬಾಲಿಕಾ, ವೈಟ್‌ಫೀಲ್ಡ್‌ನಲ್ಲಿರುವ ಟೆಸ್ಕೊ ಕಂಪನಿಗೆ ಭೇಟಿ ನೀಡಿ, ಸಿಬ್ಬಂದಿ ಜತೆ ಸಂವಾದ ನಡೆಸಿದರು.

‘ಕೆಲಸದ ಸಂಸ್ಕೃತಿ, ಲಿಂಗ ಸಮಾನತೆ ಸೇರಿದಂತೆ ವಿವಿಧ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯ ವಾಯಿತು. ನಾಗರಿಕ ಸಮಸ್ಯೆಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮಾಹಿತಿ ಕೂಡಾ ದೊರೆತವು’ ಎಂದು ಅಂಬಾಲಿಕಾ ತಿಳಿಸಿದರು. 

‘ನಾನು ಪದವಿ ಪಡೆದ ಬಳಿಕವೂ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶದ ಭಾಗವಾಗಿದ್ದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಅಸಮಾನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿ ಸಲು ಇದು ಸೂಕ್ತ ಸಮಯ’ ಎಂದರು. 

ಕೋಲ್ಕತ್ತದವರಾದ ಅಂಬಾಲಿಕಾ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆ್ಯಂಡ್ ನ್ಯೂ ಮೀಡಿಯಾದಲ್ಲಿ ವಿದ್ಯಾರ್ಥಿನಿಯಾಗಿದ್ದಾರೆ.

Post Comments (+)