ಬೆಂಗಳೂರು: ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಮರವನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಬಾರದೇ ಇದ್ದಿದ್ದರಿಂದ ಸಂಚಾರ ಪೊಲೀಸರೇ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು.
ಬೆಂಗಳೂರಿನ ಅರಮನೆ ರಸ್ತೆಯ ಓಣಿ ಮುನೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕರ್ನಾಟಕ ಡ್ರಗ್ಸ್ ಕಂಟ್ರೋಲ್ ಇಲಾಖೆಯ ಸಮೀಪ, ಷಾ ವಲಿ ಮಸೀದಿ ಎದುರು ರಸ್ತೆಯಲ್ಲಿ ಶನಿವಾರ ದೊಡ್ಡ ಮರವೊಂದು ಮುರಿದು ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಬಿಬಿಎಂಪಿಗೆ ಮಾಹಿತಿ ನೀಡಿದ್ದರು. ಸಂಚಾರ ಪೊಲೀಸರು ಕೂಡ ಮಾಹಿತಿ ರವಾನಿಸಿದ್ದರು.
ಆದರೆ, ಬಿಬಿಎಂಪಿಯಿಂದ ಸ್ಪಂದನೆ ದೊರೆಯದೇ ಇದ್ದಿದ್ದರಿಂದ, ಮಹಿಳಾ ಸಿಬ್ಬಂದಿ ಸೇರಿದಂತೆ ಸಂಚಾರ ಪೊಲೀಸರೇ ಮರ, ಕೊಂಬೆಗಳನ್ನು ತೆರವುಗೊಳಿಸಿದರು.