ಸೋಮವಾರ, ನವೆಂಬರ್ 18, 2019
25 °C

ಬೆಂಗಳೂರು | ಮಕ್ಕಳಿಗೆ ಬೆಂಕಿ ಹಚ್ಚಿದ್ದು ನಾನೆ: ತಂದೆಯ ತಪ್ಪೊಪ್ಪಿಗೆ

Published:
Updated:

ಬೆಂಗಳೂರು: ಬಕ್ಷಿಗಾರ್ಡನ್‌ನ ಮನೆಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬೆಂಕಿ  ಹೊತ್ತಿಕೊಂಡಿದ್ದು, ಅಕ್ಕ-ತಮ್ಮ ಮೃತಪಟ್ಟಿದ್ದಾರೆ.

ಕಾವೇರಿ (21), ಶ್ರೀಕಾಂತ್ (13) ಮೃತರು. ಘಟನೆಯಲ್ಲಿ ಅವರ ತಂದೆ ಮುರಳಿ, ತಾಯಿ ಗೀತಾ ಅವರಿಗೆ ಗಂಭೀರ ಗಾಯಗಳಾಗಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಂದೆಯೇ ಪತ್ನಿ ಹಾಗೂ ಮಕ್ಕಳ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಶಂಕಿಸಿದ್ದಾರೆ.

ಮಕ್ಕಳಿಗೆ ಬೆಂಕಿ ಹಚ್ಚಿದ್ದು ನಾನೆ: ತಂದೆಯ ತಪ್ಪೊಪ್ಪಿಗೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಸುರಿದು ಪತ್ನಿ, ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ನಾನೇ ಎಂದು ಮೃತ ಮಕ್ಕಳ ತಂದೆ ಮುರಳಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಮುರಳಿ ಅವರಿಗೂ ಸುಟ್ಟಗಾಯಗಳಾಗಿದ್ದು, ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾನೇ ಬೆಂಕಿ ಹಚ್ಚಿದೆ ಎಂದು ಮುರಳಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ ಮುರಳಿ ಈಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುತ್ತಿರಲಿಲ್ಲ,

ಪತ್ನಿ ಗೀತಾ ಹೂವು ಕಟ್ಟಿ ಮಾರುತ್ತಾ ಕುಟುಂಬಕ್ಕೆ ಆಸರೆಯಾಗಿದ್ದರು. ಮಗಳು ಕಾವೇರಿ ಬಿ.ಕಾಂ, ಮಗ ಶ್ರೀಕಾಂತ್ 9ನೇ ತರಗತಿ ಓದುತ್ತಿದ್ದರು.

ಪ್ರತಿಕ್ರಿಯಿಸಿ (+)